Advertisement

ಸರಕಾರದಿಂದ ಆಗದ್ದು ಇವರಿಂದ ಸಾಧ್ಯವಾಯ್ತು

08:25 AM Jun 08, 2018 | Team Udayavani |

ಪಾಟ್ನಾ: ಹೆಣ್ಣು ಹಠಕ್ಕೆ ಬಿದ್ದಳೆಂದರೆ ಏನನ್ನೂ ಸಾಧಿಸಬಲ್ಲಳು! ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನುವಂತೆ ಬಿಹಾರದ ಮಹಿಳೆಯೊಬ್ಬರು ಸರಕಾರ ಕಳೆದೊಂದು ದಶಕದಿಂದ ರಸ್ತೆ ನಿರ್ಮಿಸದ ಹಿನ್ನೆಲೆಯಲ್ಲಿ ತಾನೇ ಉಸ್ತುವಾರಿಯಾಗಿ ನಿಂತು ‘ಸ್ತ್ರೀಶಕ್ತಿಯ’ ನೆರವಿನಿಂದ ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥದ್ದೊಂದು ಅಪರೂಪದ ಘಟನೆ ನಡೆದಿರುವುದು ಇಲ್ಲಿನ ಬಂಕಾ ಜಿಲ್ಲೆಯ ಸಣ್ಣದೊಂದು ಹಳ್ಳಿಯಲ್ಲಿ. ಜವಾಬ್ದಾರಿ ಹೊತ್ತು ಶಹಬ್ಟಾಸ್‌ ಎನಿಸಿಕೊಂಡ ಮಹಿಳೆ ನಿಮಾ ಎಂಬ ಹಳ್ಳಿಯ ನಿವಾಸಿ ರೇಖಾ ದೇವಿ.

Advertisement

ನಿಮಾ, ಜೊರರು³ರ್‌ ಮತ್ತು ದುರ್ಗಾಪುರ್‌ ಮಾರ್ಗ ಕಳಪೆಯಾಗಿದ್ದರಿಂದ ಜನ ಓಡಾಡಲಾಗದೇ ತೊಂದರೆ ಅನುಭವಿಸುತ್ತಿದ್ದರು. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲೂ ಪರದಾಡಬೇಕಾದ ಸ್ಥಿತಿ ಇತ್ತು. ಜಿಲ್ಲಾಡಳಿತಕ್ಕೆ ಎಷ್ಟೇ ಬಾರಿ ಮನವಿ ಮಾಡಿದ್ದರೂ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಪಡಿಪಾಟಲು ಅಷ್ಟಿಷ್ಟಲ್ಲ. ಹೀಗಾಗಿ ಊರಿನಲ್ಲಿದ್ದ 130 ಮಹಿಳೆಯರನ್ನೇ ಸೇರಿಸಿದ ರೇಖಾ ದೇವಿ, 3 ದಿನಗಳ ಶ್ರಮದಾನದಿಂದ 2 ಕಿ.ಮೀ. ರಸ್ತೆ ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ನೋಡಿದ ಜಿಲ್ಲಾಧಿಕಾರಿ ಈಗ ಕಾಂಕ್ರೀಟ್‌ ರಸ್ತೆ ನಿರ್ಮಿಸಿಕೊಡುವುದಾಗಿ ವಾಗ್ಧಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next