Advertisement

ವನಿತಾ ಹಾಕಿ ಸರಣಿ: ಕೊರಿಯಾವನ್ನು ಕೆಡವಿದ ಭಾರತ

03:26 AM May 21, 2019 | Sriram |

ಜಿಂಚಾನ್‌ (ದಕ್ಷಿಣ ಕೊರಿಯಾ): ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧದ 3 ಪಂದ್ಯಗಳ ವನಿತಾ ಹಾಕಿ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸೋಮವಾರದ ಮೊದಲ ಪಂದ್ಯದಲ್ಲಿ 2-1 ಗೋಲುಗಳ ಜಯ ದಾಖಲಿಸಿದೆ.

Advertisement

ಯುವ ಸ್ಟ್ರೈಕರ್‌ ಲಾಲ್ರೆಮ್ಸಿಯಾಮಿ (20ನೇ ನಿಮಿಷ) ಮತ್ತು ನವನೀತ್‌ ಕೌರ್‌ (40ನೇ ನಿಮಿಷ) ಗೋಲು ಬಾರಿಸಿದರು. ಭಾರತದ ಆಕ್ರಮಣದ ಬಳಿಕ, ಪಂದ್ಯದ 48ನೇ ನಿಮಿಷದಲ್ಲಿ ಹೀಜಿಯಾಂಗ್‌ ಅವರಿಂದ ದಕ್ಷಿಣ ಕೊರಿಯಾದ ಏಕೈಕ ಗೋಲು ದಾಖಲಾಯಿತು. ಆತಿಥೇಯರ ಮೇಲುಗೈಗೆ ಗೋಲ್ಕೀಪರ್‌ ಸವಿತಾ ತಡೆಯಾಗಿ ನಿಂತರು.

ಸರಣಿಯ ದ್ವಿತೀಯ ಪಂದ್ಯ ಬುಧವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next