Advertisement

ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಕಡಿಮೆಯಾಗಿದೆ

06:40 AM Mar 30, 2018 | |

ಸುಮಾರು 5 ದಶಕಗಳಿಂದ ಮಹಿಳಾಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಶೋಷಣೆಗೆ ಸಿಲುಕಿದ ಮಹಿಳೆಯರ, ಹಿರಿಯ ನಾಗರಿಕರ ಧ್ವನಿಯಾಗಿ, ಪ್ರಸ್ತುತ ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಆಗಿರುವ ಸರಳಾ ಬಿ. ಕಾಂಚನ್‌ 1999ರಲ್ಲಿ  ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜನತಾದಳ ಪಕ್ಷದ ಕೆ. ಜಯಪ್ರಕಾಶ್‌ ಹೆಗ್ಡೆ ಎದುರು 2,400 ಮತಗಳಿಂದ ಸೋಲನ್ನು ಅನುಭವಿಸಿದ್ದರು.

Advertisement

ಅಂದು ಸ್ಪರ್ಧಿಸುವ ನಿರೀಕ್ಷೆ ಇತ್ತೆ ?
     ನಾನು ಟಿಕೆಟ್‌ ಆಕಾಂಕ್ಷಿಯಾಗಿರಲಿಲ್ಲ. ಅನಿರೀಕ್ಷಿತ ವಾಗಿ ನನಗೆ ಟಿಕೆಟ್‌ ದೊರಕಿತ್ತು. ಅಂದು ಪ್ರಥಮ ಜಿಲ್ಲಾ ಪರಿಷತ್ತಿನ ಸದಸ್ಯನಾಗಿದ್ದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮೂಲೆ ಮೂಲೆಗಳಿಗೆ ಮೂಲ ಸೌಕರ್ಯ  ಒದಗಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಅಭಿವೃದ್ಧಿ ಕೆಲಸವನ್ನು ಕಂಡು ಕಾಂಗ್ರೆಸ್‌ ಪಕ್ಷ ನನಗೆ ಕರೆದು ಟಿಕೆಟ್‌ ಕೊಟ್ಟಿತ್ತು.

ಸೋಲಿಗೆ ಕಾರಣ ?
      ಮಹಿಳಾ ಪರ ಕೆಲಸವನ್ನು ಮಾಡಿಕೊಂಡಿದ್ದರಿಂದ ನನಗೆ ಕ್ಷೇತ್ರದ ಎಲ್ಲ ಕಡೆ ಮಹಿಳೆಯರ ಬೆಂಬಲ ಇತ್ತು. ಮತಯಾಚನೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತ ರೊಂದಿಗೆ ಮಹಿಳೆಯರೂ ನನ್ನ ಜತೆಯಲ್ಲಿರುತ್ತಿದ್ದರು. 15 ಸಾವಿರಕ್ಕೂ ಅಧಿಕ ಮತದಿಂದ ಜಯ ಸಾಧಿಸುವ ಬಗ್ಗೆ ಸಮೀಕ್ಷೆಯೂ ಇತ್ತು. ಆದರೆ ಚುನಾವಣೆಗೆ ಎರಡು ದಿನ ಇರುವಾಗ ಜಾತಿ ರಾಜಕಾರಣ ಮತ್ತು ಹಣಬಲದ ಎದುರು ಸೋಲೊಪ್ಪಬೇಕಾಯಿತು.

ಆ ಬಳಿಕ ಸ್ಪರ್ಧೆಗೆ ಮುಂದಾಗಿದ್ದೀರಾ?
     ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರಿಂದ ಮುಂದಿನ ಚುನಾವಣೆಯಲ್ಲೂ ಪಕ್ಷದ ನಾಯಕರು ನನ್ನನ್ನೇ ಅಭ್ಯರ್ಥಿಯಾಗಿ ನಿಲ್ಲುವಂತೆ ಸೂಚಿಸಿದ್ದರು. ರಾಜಕೀಯ ಬೆಳವಣಿಗೆಯಿಂದ ಅದು ಕೈ ತಪ್ಪಿ ಹೋಯಿತು.

ಈಗಿನ ರಾಜಕೀಯ ಸ್ಥಿತಿ ?
     ಈಗ ಏನಿದ್ದರೂ ದುಡ್ಡಿನ ಮೇಲಿನ ರಾಜಕೀಯ ಮತ್ತು ದ್ವೇಷದ ರಾಜಕೀಯ. ಈಗಿನ ರಾಜಕೀಯದಲ್ಲಿ ಮಹಿಳೆಯರನ್ನು ಮುಂದೆ ಬರಲು ಬಿಡುವುದಿಲ್ಲ.

Advertisement

ಈಗ ಟಿಕೆಟ್‌ ಆಕಾಂಕ್ಷಿ ಆಗಿದ್ದೀರಾ ?
     ಖಂಡಿತ ಇಲ್ಲ. ವಯಸ್ಸಾಗಿದೆ, ಹಿರಿಯ ನಾಗರಿಕರ ಮತ್ತು ಮಹಿಳಾ ಪರ ಕೆಲಸದಲ್ಲಿ ಸಾಕಷ್ಟು ಬಿಝಿಯಾಗಿದ್ದೇನೆ. ಅವರ ನೋವು ನಲಿವಿಗೆ ಸ್ಪಂದಿಸುತ್ತಿದ್ದೇನೆ. ಇದು ಮನಸ್ಸಿಗೆ ತುಂಬಾ ತೃಪ್ತಿ ತಂದಿದೆ.

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next