Advertisement
ಶುಕ್ರವಾರ ಬನಹಟ್ಟಿಯ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೊಂದ ಕುಟುಂಬದ ಜೊತೆ ನಾವಿದ್ದೇವೆ ಧೈರ್ಯಗೆಡಬೇಡಿ ಅಂತಹ ಒಂದು ಮಾತು ಬಿಜೆಪಿಯ ಮಂತ್ರಿ ಹಾಗೂ ಮುಖಂಡರ ಬಾಯಿಂದ ಬರೋದಿಲ್ಲ. ಬದಲಾಗಿ ತದ್ವಿರುದ್ಧವಾಗಿ ಮಾತನಾಡುತ್ತಾರೆ. ಅವರ ಮನಸ್ಸಿನ ಸ್ಥಿತಿ ಎಷ್ಟು ಕೀಳಾಗಿದೆ, ನೀಚವಾಗಿದೆ ಎನ್ನುವುದನ್ನು ತೋರಿಸುತ್ತದೆ ನಾವು ಇದನ್ನು ಕಾಂಗ್ರೆಸ್ ಪಕ್ಷದಿಂದ ಖಂಡಿಸುತ್ತೇವೆ ಎಂದರು.
Related Articles
Advertisement
ಕಾಂಗ್ರೆಸ್ ಪಕ್ಷ ತೊರೆದು ಹೋಗಿರುವ ಎಲ್ಲರೂ ಮರಳಿ ಬರುವವರಿಗೆ ಸ್ವಾಗತಿಸುತ್ತೇನೆ. ಬಡವರಿಗೆ, ಶ್ರೀಮಂತರಿಗೆ ಬೇದ ಭಾವ ಇಲ್ಲದೇ, ಧರ್ಮ, ಜಾತಿ ಬೇಧ ಇಲ್ಲದೇ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಕೂಡಿಸುವ ಕೆಲಸ ಮಾಡುತ್ತದೆ. ಅದು ಅವರಿಗೆ ಬೇಕಾಗಿಲ್ಲ. ಅವರು ಧರ್ಮ, ಜಾತಿಯ ಹೆಸರಿನಲ್ಲಿ ಒಡೆಯುತ್ತಾರೆ. ಪಕ್ಷ ತಾಯಿ ಇದ್ದಂತೆ ಅವಳನ್ನು ಸದೃಢಗೊಳಿಸಬೇಕು. ಜಾತಿ, ಧರ್ಮ ರಾಜಕಾರಣಕ್ಕೆ ಬಲಿಯಾಗಬೇಡಿ, ಅಭಿವೃದ್ಧಿ ಪಥದಲ್ಲಿ ನಮ್ಮ ಕೈ ಜೋಡಿಸಿ ಎಂಬುದು ನಮ್ಮ ವಿನಂತಿ. ಪಕ್ಷ ಸಂಘಟನೆಗೆ ಮೊದಲು ಒತ್ತು ಕೊಡಿ, ಪಕ್ಷವನ್ನು ಸದೃಢ ಮಾಡಲು ನನ್ನ ಜೊತೆ ಕೈಜೋಡಿಸಿ ಎಂದು ಉಮಾಶ್ರೀ ಹೇಳಿದರು.
ಇದನ್ನೂ ಓದಿ:ಶಿಥಿಲಗೊಂಡ ಅಂಗನವಾಡಿ ಕಟ್ಟಡ ದುರಸ್ತಿ ಮಾಡಿ
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಹಾಗೂ ಬಿಜೆಪಿ ನಗರಸಭೆ ಸದಸ್ಯೆಯ ಪತಿ ಶೇಖರ ಹಕಲದಡ್ಡಿ ಹಾಗೂ ಶಾಂತವೀರ ಬೀಳಗಿ ಬಿಜೆಪಿ ತೋರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ ಮಾಜಿ ಸಚಿವೆ ಉಮಾಶ್ರೀ ಸ್ವಾಗತಿಸಿದರು.
ಸುರೇಶ ಮಡಿವಾಳ, ಸುರೇಶ ಹಿಪ್ಪರಗಿ, ಚಿದಾನಂದ ಮಟ್ಟಿಕಲ್ಲಿ, ನೀಲಕಂಠ ಮುತ್ತೂರ, ನಗರಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಮಾಳು ಹಿಪ್ಪರಗಿ, ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಚಿದಾನಂದ ಗಾಳಿ, ಚನ್ನವೀರಪ್ಪ ಹಾದಿಮನಿ, ಬಸವರಾಜ ಗುಡೋಡಗಿ, ಓಂಪ್ರಕಾಶ ಮನಗೂಳಿ, ಸಂಗಪ್ಪ ಕುಂದಗೋಳ, ನಸೀಮ ಮೊಕಾಸಿ, ರಾಹುಲ ಕಲಾಲ, ರಮೇಶ ಸವದಿ, ರಾಮು ಜುಗಳಿ, ಹಾರುಣ ಬೇವೂರ, ಹಾರುಣ ಸಾಂಗ್ಲೀಕರ, ಬಸವರಾಜ ಶಿರೋಳ, ಮೊಹಮ್ಮದ ಝಾರೆ, ಸಂಜು ಜೋತಾವರ, ಗೋವಿಂದ ನಿಂಗಸಾನಿ, ಶ್ರೀಶೈಲ ಮೇಣಿ ಸೇರಿದಂತೆ ಅನೇಕರು ಇದ್ದರು.