Advertisement

ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ನಾಲೆಗೆ ಬಿದ್ದು ಸಾವು!

11:53 AM Sep 01, 2022 | Team Udayavani |

ಹುಣಸೂರು: ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ತಲೆ ಸುತ್ತು ಬಂದು ನಾಲೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಶಿವಣ್ಣ ನಾಯಕರ ಪತ್ನಿ ಜಯಮ್ಮ (61 ವ) ಎಂಬುವವರೇ ಮೃತಪಟ್ಟ ದುರ್ದೈವಿ.

ಗ್ರಾಮದ ಬಳಿ ತುಂಬು ಹರಿಯುತ್ತಿರುವ ಹಾರಂಗಿ ನಾಲೆಯ ಉಪಕಾಲುವೆಯಲ್ಲಿ ಗಣೇಶ ಹಬ್ಬದ ದಿನದಂದು ಬಟ್ಟೆ ಒಗೆಯಲು ಹೋಗಿದ್ದ ವೇಳೆ ಜಯಮ್ಮ ತಲೆಸುತ್ತಿನಿಂದ ನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಸಂಜೆ ವೇಳೆಗೆ ದಾರಿಹೋಕರು ನಾಲೆಯಲ್ಲಿ ಬಟ್ಟೆ ತೇಲುತ್ತಿದ್ದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ ಮೇರೆಗೆ ಮನೆಯವರು ಹೋಗಿ ನೋಡಿದ ವೇಳೆ ಜಯಮ್ಮನವರ ಶವ ತೇಲುತ್ತಿತ್ತು.

ಗ್ರಾಮಸ್ಥರ ನೆರವಿನಿಂದ ಕುಟುಂಬದವರು ಶವ ಮೇಲೆತ್ತಿದ ನಂತರ ಅಂತ್ಯ ಸಂಸ್ಕಾರ ನಡೆಸಿದರು.

ಇದನ್ನೂ ಓದಿ:ಇನ್ಮುಂದೆ ನಿಮಗೆ ನೀವೇ ವಾಟ್ಸಪ್ ಮೆಸೇಜ್ ಕಳುಹಿಸಬಹುದು: ಇಲ್ಲಿದೆ ನೋಡಿ ಹೊಸ ಫೀಚರ್ ನ ಮಾಹಿತಿ

Advertisement

ಕುಟುಂಬಸ್ಥರ ಆಕ್ರಂದನ: ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮಸ್ಥರು  ಜಯಮ್ಮ ಸಾವಿಗೆ ಕಣ್ಣೀರು ಹಾಕಿದರು. ಗಣಪತಿ ಹಬ್ಬದ ಸಡಗರದಲ್ಲಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಪತಿ, ಓರ್ವ ಪುತ್ರ ಇಬ್ಬರು ಪುತ್ರಿಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next