Advertisement

ಮಹಿಳೆಯರಿಗೆ ಸಮ-ಬೆಸ ನಿಯಮದಿಂದ ವಿನಾಯಿತಿ: ಅರವಿಂದ್ ಕೇಜ್ರಿವಾಲ್

09:35 AM Oct 13, 2019 | Team Udayavani |

ನವದೆಹಲಿ: ಮಹಿಳೆಯರಿಗೆ ಮತ್ತು 12 ವರ್ಷದೊಳಗಿನ ಮಕ್ಕಳೊಂದಿಗೆ ಪ್ರಯಾಣಿಸುವ ಜನರಿಗೆ ಸಮ-ಬೆಸ ಯೋಜನೆಯಿಂದ ವಿನಾಯಿತಿ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ಒಡೆತನದ ಸಿ ಎನ್ ಜಿ ವಾಹನಗಳಿಗೆ ಸಮ-ಬೆಸ ನೀತಿಯಿಂದ ವಿನಾಯಿತಿ ಇರುವುದಿಲ್ಲ.   ದೀಪಾವಳಿ ಕಳೆದ ನಂತರ ನವೆಂಬರ್ 4 ರಿಂದ 15 ರವರೆಗೆ ದೆಹಲಿಯಲ್ಲಿ  ಮೂರನೇ ಬಾರಿಗೆ ಸಮ-ಬೆಸ ಯೋಜನೆ ಜಾರಿಗೆ ತರಲಾಗುವುದು ಎಂದರು.

ಆದರೇ ದ್ವಿಚಕ್ರ ವಾಹನಗಳಿಗೆ  ಈ ಯೋಜನೆಯಿಂದ ವಿನಾಯಿತಿ ನೀಡಬೇಕೆ ಬೇಡವೇ ಎಂಬುದರ ಕುರಿತು ಇನ್ನು ನಿರ್ಧರಸಲಾಗಿಲ್ಲ ಎಂದು ತಿಳಿಸಿದ್ದಾರೆ

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಸಮ-ಬೆಸ ನಿಯಮವನ್ನು ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ ನಂಬರ್ ಪ್ಲೇಟ್ ನಲ್ಲಿ ಸಮ ಸಂಖ್ಯೆ ಇರುವ ವಾಹನಗಳನ್ನು ಒಂದು ದಿನ ರಸ್ತೆಗೆ ಇಳಿಸಿದರೆ, ಬೆಸ ಸಂಖ್ಯೆ ಇರುವ ವಾಹನಗಳನ್ನು ಮತ್ತೊಂದು ದಿನ ರಸ್ತೆಗೆ ಇಳಿಸುವುದು ಅನಿವಾರ್ಯವಾಗಿತ್ತು. ಇದೀಗ ಮೂರನೇ ಬಾರಿಗೆ ಆ ನಿಯಮ ನವೆಂಬರ್ ನಲ್ಲಿ ಜಾರಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next