Advertisement

ಸಾಧನೆಯ ಶಿಖರವೇರಿದ ಮಹಿಳಾ ಎಂಜಿನಿಯರ್‌ಗಳು

07:15 AM Jan 21, 2019 | |

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಪುರುಷ ಪ್ರಧಾನ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿರುವ ಎಂಜಿನಿಯರಿಂಗ್‌ ವಿಭಾಗದಲ್ಲಿ ಇಂದು ಅನೇಕ ಮಹಿಳೆಯರು ಸಣ್ಣ ವಯಸ್ಸಿನಲ್ಲೇ ಜಗತøಸಿದ್ಧ ಕಂಪೆನಿಗಳಲ್ಲಿ ಉನ್ನತ ಸ್ಥಾನವನ್ನು ಧಕ್ಕಿಸಿಕೊಂಡಿದ್ದಾರೆ. ಅವರ ಈ ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮದ ಜತೆಗೆ ಅನುಭವದಿಂದ ಕಲಿತ ಪಾಠವೂ ಇದೆ. ಇದು ಸಾಧಕರಾಗಬೇಕು ಎನ್ನುವ ಮಹಿಳೆಯರಿಗೆ ಸ್ಫೂರ್ತಿ ನೀಡುವಂತಿದೆ.

Advertisement

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹತ್ತರವಾದ ಸಾಧನೆಯನ್ನೇ ಮಾಡುತ್ತಿದ್ದಾರೆ. ಪುರುಷರಿಗೆ ಪೈಪೋಟಿ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ತಮ್ಮಿಂದ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತಲೇ ಇದ್ದಾರೆ.

ಎಂಜಿನಿಯರ್‌ ಅಂದ ತತ್‌ಕ್ಷಣ ಎಲ್ಲರ ಕಣ್ಣ ಮುಂದೆ ಸುಳಿಯುವುದು ಪುರುಷರು. ಅದು ತುಂಬಾ ಕಷ್ಟದ ಕೆಲಸ ಎಂದೇ ಭಾವಿಸುತ್ತಿದ್ದವರು. ಆದರೆ ಇಂದು ಈ ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಛಾಪನ್ನು ಬೀರುತ್ತಿದ್ದಾರೆ. ಪುರುಷ ಪ್ರಾಬಲ್ಯದ ವೃತ್ತಿಯಲ್ಲಿ ಎತ್ತರದ ಶಿಖರವೇರಿರುವ ಅನೇಕ ಮಹಿಳೆಯರ ಸ್ಥಾನದಲ್ಲಿ ನಾವೇನೂ ಕಡಿಮೆ ಇಲ್ಲ ಎಂಬಂತೆ ಹೆಸರು ಮಾಡಿದ್ದಾರೆ.

ಕೋಮಲ್‌ ಮಾಂಗಟನಿ
ಉಬರ್‌ನ ಡೇಟಾ ವಿಭಾಗದ ಮುಖ್ಯಸ್ಥೆಯಾಗಿರುವ ಕೋಮಲ್‌ ಮಾಂಗಟನಿ ಅವರ ಟೆಕ್‌ ತಂಡವು ಹೊಸ ಮಾರುಕಟ್ಟೆಯ ಅವಕಾಶಗಳನ್ನು ಅನ್ವೇಷಿಸಲು ಮತ್ತು ವ್ಯವಹಾರಕ್ಕೆ ಸಹಾಯ ಮಾಡುತ್ತದೆ. ಎಂಜಿನಿಯರಿಂಗ್‌ ಸಂಸ್ಕೃತಿಯನ್ನು ಬೃಹತ್‌ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ತಾಂತ್ರಿಕ ನಾವಿನ್ಯತೆಯನ್ನು ಉತ್ತೇಜಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಹಾಗೆಯೇ ಇವರು ಎಂಜಿನಿಯರಿಂಗ್‌ ವೃತ್ತಿಯನ್ನು ಪ್ರವೇಶಿಸುವ ಮಹಿಳೆಯರನ್ನು ಪ್ರೋತ್ಸಾಹಿಸಲು ಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ಅನುಭವಗಳಿಂದ ಎಲ್ಲರನ್ನೂ ಸೆಳೆಯುತ್ತಿರುವ ಇವರು, ಅನುಭವಗಳಿಂದ ನಾವು ಪಾಠ ಕಲಿಯುತ್ತೇವೆ ಮತ್ತು ಹೊಸ ಹೊಸದನ್ನು ಸೃಷ್ಟಿಸುತ್ತೇವೆ. ಯಶಸ್ಸು ಬಲಿಯುವುದು ಕೂಡ ಅನುಭವದ ಮೇಲೆ ಆದ್ದರಿಂದ ಪ್ರತಿ ಸಂದರ್ಭಗಳ ಫ‌ಲಿತಾಂಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾಂಗಟನಿ ಹೇಳುತ್ತಾರೆ.

ಪ್ರಿಯಾ ಬಾಲಸುಬ್ರಹ್ಮಣ್ಯಂ
ಆ್ಯಪಲ್‌ ಕಂಪೆನಿಯಲ್ಲಿ ಐಫೋನ್‌ ಕಾರ್ಯಾಚರಣೆಯ ಉಪಾಧ್ಯಕ್ಷೆ ಹಾಗೂ ಆ್ಯಪಲ್‌ ಇಂಕ್‌ನ ಕೋರ್‌ ಟೆಕ್ನಾಲಜಿಸ್ಟ್‌ ಆಗಿರುವ ಪ್ರಿಯಾ ಬಾಲಸುಬ್ರಹ್ಮಣ್ಯಂ 2001ರಲ್ಲಿ ಆ್ಯಪಲ್‌ ಕಂಪೆನಿಗೆ ಕಾಲಿಟ್ಟರು. 2012ರವರೆಗೆ ಹಲವು ಕಾರ್ಯಗಳನ್ನು ಮತ್ತು ಮಾಹಿತಿ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಲಸಿರುವ ಇವರು 2013ರಿಂದ ಐಫೋನ್‌ ಕಾರ್ಯಾಚರಣೆ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

ಬಿಸಿನೆಸ್‌ ಇನ್‌ಸೈಡರ್‌ ಪ್ರಕಾರ ಅತ್ಯಂತ ಪ್ರಭಾವಿ ಮಹಿಳಾ ಎಂಜಿನಿಯರ್‌ಗಳಲ್ಲಿ ಇವರು ಓರ್ವರಾಗಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ದಿ ವಾಲ್‌ ಸ್ಟ್ರೀಟ್ ಜರ್‌ರ್ನಲ್‌ ಪ್ರಕಾರ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ ಫೋನ್‌ಗಳಲ್ಲಿ ಒಂದಾದ ಆ್ಯಪಲ್‌ ಉತ್ಪನ್ನಗಳ ತಯಾರಿಸುವ ಹೊಸ ವ್ಯವಹಾರವನ್ನು ಮಾತುಕತೆ ನಡೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಯಾರಾದರೂ ಅವರ ಯಶಸ್ಸಿನ ಗುಟ್ಟೇನೆಂದು ಕೇಳಿದರೆ ಅವರು ಹೇಳುವ ಮಾತು ‘ನೀವು ಬದುಕಲು ಬಯಸುವ ಜೀವನವನ್ನು ಜೀವಿಸಿ. ನಿಮ್ಮ ಜತೆಗೆ ನಿಮ್ಮ ಸುತ್ತಲಿರುವವರನ್ನು ಬೆಳೆಸಿ. ಜೀವನದಲ್ಲಿ ಇತರರಿಂದ ಕಲಿಯುವುದು ಮತ್ತು ನಿಮ್ಮ ಸಾಮರ್ಥ್ಯ ಇವುಗಳನ್ನು ಯಾವತ್ತಿಗೂ ಅನ್‌ಲಾಕ್‌ ಮಾಡಿಟ್ಟುಕೊಳ್ಳಿ. ಇದರಿಂದ ನೀವು ನಿಮಗರಿವಿಲ್ಲದಂತೆ ಬೆಳೆಯುತ್ತೀರಿ. ಕೆಲಸವನ್ನು ಕಷ್ಟದ ಜತೆಗೆ ಇಷ್ಟಪಟ್ಟು ಮಾಡಬೇಕು. ಆಗ ಕ್ಲಿಷ್ಟ ಕಾರ್ಯಗಳೂ ಸುಲಭವಾಗುತ್ತದೆ.’

ಪ್ರಿಯಾ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಚೆನ್ನೈ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಮುಗಿಸಿ, ಅನಂತರ ಸಾಫ್ಟವೇರ್‌ ಟೆಕ್ನಾಲಜಿ ಹಾಗೂ ಸಿಸ್ಟಮ್‌ ಮ್ಯಾನೆಜ್‌ಮೆಂಟ್‌ನಲ್ಲಿ ಡಿಪ್ಲೋಮಾವನ್ನು ಮುಗಿಸಿದ್ದಾರೆ. 2017ರಲ್ಲಿ ಮಿಚಿಗನ್‌ ಸ್ಟೇಟ್ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್‌ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಅಪರ್ಣಾ ರಮಣಿ
ಫೇಸ್‌ಬುಕ್‌ನ ಎಂಜಿನಿಯರಿಂಗ್‌ ರಿಯಲ್‌ಟೈಮ್‌ ಡಾಟಾದ ನಿರ್ದೇಶಕಿಯಾಗಿದ್ದಾರೆ ಅಪರ್ಣಾ ರಮಣಿ. ಇವರ ತಂಡ ಆಂತರಿಕವಾಗಿ ಸಿದ್ಧವಿಲ್ಲದ ಸವಾಲುಗಳನ್ನು ಚೆನ್ನಾಗಿ ನಿರ್ವಹಿಸಲು ತಿಳಿದಿರುವುದರಿಂದ ಇದು ಇವರ ಯಶಸ್ಸಿನ ಮುನ್ನುಡಿಯಾಗಿದೆ. ಇವರು ಮೈಕ್ರೋಸಾಫ್ಟ್ನಲ್ಲಿ ಸಂದರ್ಭೋಚಿತವಾಗಿ ಜಾಹೀರಾತು ವ್ಯವಸ್ಥೆಗಳಲ್ಲಿ ಕೆಲಸ ಮಾಡಿದ್ದು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಂಜಲಿ ಜೋಶಿ
ಗೂಗಲ್‌ ಉತ್ಪನ್ನ ನಿರ್ವಹಣೆ ವಿಭಾಗದ ಉಪಾಧ್ಯಕ್ಷೆಯಾಗಿರುವ ಅಂಜಲಿ ಜೋಶಿ, ಗೂಗಲ್‌ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಅನುಭವ ಹೊಂದಿದ್ದು ಸಂಸ್ಥೆಯ ಯಾವುದೇ ರೀತಿಯ ಸಮಸ್ಯೆಗಳನ್ನು ನಿಭಾಯಿಸಬಲ್ಲ ಎಂಜಿನಿಯರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ಪನ್ನ ಮತ್ತು ಎಂಜಿನಿಯರಿಂಗ್‌ ತಂಡದ ನಾಯಕಿಯಾಗಿ ಹುಡುಕಾಟ, ಇಮೇಜ್‌ ಸರ್ಚ್‌, ಆರೋಗ್ಯ ಸಂಬಂಧಿ ವಿಷಯಗಳ ಹುಡುಕಾಟ, ನಕ್ಷೆಗಳು, ಭಾಷಾಂತರ ಮತ್ತು ಸ್ಥಳೀಕರಣ ಸಹಿತ ಹಲವಾರು ವಿಚಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. 1981ರಲ್ಲಿ ಐಐಟಿ ಕಾನ್ಪುರದಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮುಗಿಸಿ ಅನಂತರ ಯುಎಸ್‌ಎನಲ್ಲಿ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ ನಿಂದ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಸ್ಟಾನ್ಪೋರ್ಡ್‌ ಯೂನಿವರ್ಸಿಟಿಯಿಂದ ಮತ್ತೂಂಜು ಸ್ನಾತಕೋತ್ತರ ಪದವಿ ಗಳಿಸಿ 1998ರಿಂದ ನೆಟ್ವರ್ಕ್‌ ಎಂಜಿನಿಯರಿಂಗ್‌ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನಂದಿನಿ ರಮಣಿ
ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನ ಉಪಾಧ್ಯಕ್ಷೆಯಾಗಿರುವ ನಂದಿನಿ ರಮಣಿ, ಉದಯೋನ್ಮುಖ ಮಾರುಕಟ್ಟೆಗಾಗಿ ಮತ್ತು ಭಾರತದಲ್ಲಿ ಟ್ವಿಟರ್‌ನ ಬಳಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡುವ ಇವರು, ಪ್ರತಿ ವರ್ಷ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಭಿಯಾನ ಕೈಗೊಳ್ಳುತ್ತಾರೆ. ಅದಲ್ಲದೆ ಹೆಲ್ತ್‌ಕೇರ್‌ ಇವರ ಬದುಕಿನ ಇನ್ನೊಂದು ಭಾಗವಾಗಿದೆ. ಬಿಡುವಿನ ವೇಳೆಯಲ್ಲಿ ಅವರು ಇಂತಹ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.ಬಡವರು, ಆರೋಗ್ಯ ಸರಿಯಿಲ್ಲದೆ ಒದ್ದಾಡುವವರಿಗೆ ತಮ್ಮಿಂದಾದ ಸಹಾಯ ಮಾಡುವ ಇವರು ಹಳ್ಳಿ ಶಾಲೆಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಪ್ರೀತಿ ಭಟ್ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next