Advertisement

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವು

10:28 AM Oct 05, 2021 | Team Udayavani |

ಬೆಂಗಳೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಎಫ್ಐಸಿಸಿಐ, ಫೆಡರೇಶನ್‌ ಆಫ್ ಲೇಡೀಸ್‌ ಆರ್ಗನೈಜೇಶನ್‌ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿನ ಎÇÉಾ ಮಹಿಳೆಯರು ದುಡಿಯುವಂತಾಗಬೇಕು.

Advertisement

ದುಡಿಯುವ ಕೈಗಳು ಹೆಚ್ಚಾದರೆ ದೇಶದ ಆರ್ಥಕತೆ ಕೂಡ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಹಿಳಾ ಉದ್ಯಮಿಗಳಪರವಾಗಿ ಇರುತ್ತದೆ. ಸರ್ಕಾರ ನೀಡುವ ಹಲವು ಸಬ್ಸಿಡಿ ಮತ್ತು ಸವಲತ್ತುಗಳನ್ನು ಪಡೆದು ಮಹಿಳೆಯರು ಸಾಧನೆ ಮಾಡಬೇಕು ಎಂದು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಹೆಚ್ಚಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆಗ ದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ ತಿಳಿಸಿದರು.

ಮಹಿಳೆಯರಿಗೆ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವಂತಹ ಶಕ್ತಿ ಇದೆ. ಪುರುಷರಿಗೆ ಆ ಶಕ್ತಿ ಇಲ್ಲ. ಹೀಗಾಗಿ ಮಹಿಳಾ ಶಕ್ತಿ ಮತ್ತಷ್ಟು ಹೆಚ್ಚಬೇಕಾದರೆ ಆರ್ಥಿಕ ಸಬಲೀಕರಣ ಆಗಬೇಕು. ಹಣಕಾಸಿನ ವಿಚಾರದಲ್ಲಿ ಪುರುಷರ ಮೇಲೆ ಅವಲಂಬನೆ ಕಡಿಮೆ ಆಗಬೇಕು. ಮಹಿಳೆಯರು ಸಶಕ್ತರಾಗಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕು ಎಂದು ಹೇಳಿದರು.. ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ್‌ ನಾವಡಗಿ, ಎಫ್ಎಲ್‌ಒ ಅಧ್ಯಕ್ಷೆ ರೇವತಿ ರಾಜು ಮತ್ತು ಹಲವಾರು ಜನ ಮಹಿಳಾ ಉದ್ಯಮಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next