ಹೊಸಪೇಟೆ: ರಾಜಕೀಯ ಪ್ರಾತಿನಿಧ್ಯದಿಂದ ಮಹಿಳೆಯರ ಸಬಲೀಕ ರಣ ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಲೇಖಕಿ ಹಾಗೂ ಸಾಮಾಜಿಕ ಚಿಂತಕಿ ಡಾ| ಲೀಲಾ ಸಂಪಿಗೆ ಅಭಿಪ್ರಾಯ ಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗದ ವತಿ ಯಿಂದ ಅಲ್ಲಂ ಸುಮಂಗಲಮ್ಮ ಮತ್ತು ಶ್ರೀಅಲ್ಲಂ ಕರಿಬಸಪ್ಪ ದತ್ತಿನಿಧಿಯ ಆಶ್ರಯದಲ್ಲಿ 110ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚಣೆಯ ಪ್ರಯುಕ್ತ ಶುಕ್ರ ವಾರ ಆಯೋಜಿಸಿದ್ದ ಲಿಂಗ ಸಮಾನತೆಯ ಪ್ರಸ್ತುತ ಸವಾಲುಗಳು ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
1000 ಪುರುಷರಿಗೆ 914 ಮಹಿಳೆಯರಿದ್ದು, ಲಿಂಗಾನುಪಾತದಲ್ಲಿ ಅಸಮಾನತೆ ಉಂಟಾಗಿದೆ. ಶೇ.78ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂದು ಶಿಕ್ಷಣವು ಹೂಡಿಕೆಯಾಗಿದ್ದು, ವ್ಯಕ್ತಿತ್ವವನ್ನು ರೂಪಿಸುತ್ತಿಲ್ಲ. ಉದ್ಯೋಗ, ಬಂಡವಾಳ, ಲಾಭ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿದೆ. ಶೇ.80ರಷ್ಟು ಮಹಿಳೆಯರು ದಿನಕ್ಕೆ 20 ರೂ.ಗಾಗಿ ಬದುಕುತ್ತಿದ್ದಾರೆ. ಶೇ.78ರಷ್ಟು ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಆಸ್ತಿಯ ಮಾಲೀಕತ್ವ ಶೇ.86ರಷ್ಟು ಪುರುಷರಿಗಿದ್ದರೆ ಶೇ.14ರಷ್ಟು ಮಹಿಳೆಯರಿಗಿದೆ. ಉದ್ಯಮ ಕ್ಷೇತ್ರದಲ್ಲಿ ಕೇವಲ ಶೇ.5ರಷ್ಟು ಮಹಿಳೆಯರು ಇದ್ದಾರೆ ಎಂದು ಮಾಹಿತಿ ನೀಡಿದರು.
ಮಹಿಳೆಯ ಅಸಮಾನತೆಯ ಬೇರುಗಳು ಇರುವುದೇ ರಾಜಕೀಯ ಕ್ಷೇತ್ರದಲ್ಲಿ. ಶೇ.33ರಷ್ಟು ಮೀಸಲಾತಿ ನೆನಗುದ್ದಿಗೆ ಬಿದ್ದಿದೆ. 3 ಹಂತಗಳ ಪಂಚಾಯತ್‌ನಲ್ಲಿ ಶೇ.50ರಷ್ಟು ಮೀಸಲಾತಿ ಮಹಿಳೆಯರಿಗೆ ಇರುವುದು ವಿಶೇಷವಾಗಿದೆ. 144 ರಾಷ್ಟ್ರಗಳ ಸಮೀಕ್ಷೆಯಿಂದ ಶಿಕ್ಷಣ, ಉದ್ಯೋಗದಲ್ಲಿ ಅವಕಾಶ, ಆರೋಗ್ಯ, ತೀರ್ಮಾನ ತೆಗೆದುಕೊಳ್ಳುವ ಹಕ್ಕು, ವೇತನ ತಾರತಮ್ಯ ಇವುಗಳಲ್ಲಿ ಮಹಿಳೆ ಹಿಂದುಳಿದಿರುವ ರಾಷ್ಟ್ರಗಳಲ್ಲಿ ಭಾರತ 108ನೇ
ಸ್ಥಾನದಲ್ಲಿದೆ. ಇದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಎಚ್ಚರಿಸಿದರು.
ಲಲಿತ ಕಲೆಗಳ ನಿಕಾಯದ ಡೀನ್ ಡಾ| ಡಿ.ಪಾಂಡುರಂಗಬಾಬು ಮಾತನಾಡಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಶಿವಾನಂದ ಎಸ್. ವಿರಕ್ತಮಠ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ಬಿ.ಎಂ. ಸುಮಲತಾ ನಿರೂಪಿಸಿದರು. ಎನ್. ತಾಯಶ್ರೀ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಿತ ಮಹಿಳೆ ಎಂದರೆ ಲೈಂಗಿಕ ವೃತ್ತಿಯ ಮಹಿಳೆಯಾಗಿದ್ದಾಳೆ. ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು, ಮಹಿಳೆಯರ ಮಾರಾಟ, ಎಳೆವಯಸ್ಸಿನ ಹೆಣ್ಣುಮಕ್ಕಳ ಸಾಗಾಣಿಕೆ, ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಕಾಡುವ ರೌಡಿಗಳು, ಬಾಡಿಗೆ ಗಂಡಂದಿರು, ಮಧ್ಯವರ್ತಿಗಳ ದೌರ್ಜನ್ಯ, ಬಡತನ, ಅಪೌಷ್ಟಿಕತೆ, ರಕ್ತಹೀನತೆ, ನಿರುದ್ಯೋಗ, ಮೌಡ್ಯತೆಗಳಿಂದ ಕೆಳವರ್ಗದ ಈ ಲೈಂಗಿಕ ವೃತ್ತಿಯ ಮಹಿಳೆಯರಿಗೆ ಮಾನಸಿಕ ಧೈರ್ಯ ನೀಡಿ ವೈಜ್ಞಾನಿಕ ಪುನರ್‌ವಸತಿ ಸೌಕರ್ಯ ಕಲ್ಪಿಸುವ ಅತ್ಯಂತ ದೊಡ್ಡ ಸವಾಲು ನಮ್ಮ ಮುಂದಿದೆ.
ಡಾ| ಲೀಲಾ ಸಂಪಿಗೆ, ಲೇಖಕಿ ಹಾಗೂ ಸಾಮಾಜಿಕ ಚಿಂತಕಿ