ಮಲೇಬೆನ್ನೂರು: ಹರಿಹರ ತಾಲೂಕಿನಲ್ಲಿ ಮೇಲ್ದರ್ಜೆಗೇರಿದ ಪ್ರಥಮ ಪುರಸಭೆಯಾಗಿರುವ ಮಲೇಬೆನ್ನೂರು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಹಾಗಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಕಸರತ್ತು ಆರಂಭಗೊಂಡಿದೆ.
ಪುರಸಭೆ ಒಟ್ಟು 23 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಪಕ್ಷದಿಂದ 8 ಸದಸ್ಯರಿದ್ದಾರೆ. ಅವರಲ್ಲಿ 3 ಜನ ಪುರುಷ ಹಾಗೂ 5 ಜನ ಮಹಿಳಾ ಸದಸ್ಯರಿದ್ದಾರೆ. ಬಿಜೆಪಿಯಿಂದ 7 ಸದಸ್ಯರಿದ್ದು ಅವರಲ್ಲಿ 4 ಜನ ಪುರುಷ ಹಾಗೂ 3 ಮಹಿಳಾ ಸದಸ್ಯರಿದ್ದಾರೆ. ಜೆಡಿಎಸ್‌ನಿಂದ 5 ಸದಸ್ಯರಿದ್ದು,2 ಜನ ಪುರುಷ ಹಾಗೂ 3 ಜನ ಮಹಿಳಾ ಸದಸ್ಯರಿದ್ದಾರೆ. 3 ಜನ ಪಕ್ಷೇತರ ಸದಸ್ಯರಿದ್ದುಅವರಲ್ಲಿ 2 ಪುರುಷ ಹಾಗೂ 1 ಮಹಿಳಾ ಸದಸ್ಯರಿದ್ದಾರೆ.
ಬಹುಮತಕ್ಕೆ 12 ಸದಸ್ಯರ ಬೆಂಬಲದ ಅಗತ್ಯವಿದ್ದು, ಯಾವುದೇ ಪಕ್ಷ ಬಹುಮತ ಹೊಂದಿಲ್ಲ. ಹಿಂದಿನ ಎರಡೂವರೆ ವರ್ಷ ಜೆಡಿಸ್ ಎಸ್‌ನ ಅಂಜಿನಮ್ಮ ವಿಜಯಕುಮಾರ್ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಬಿ.ಎನ್. ಚನ್ನಪ್ಪಸ್ವಾಮಿ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ರಾಜ್ಯಸರ್ಕಾರ ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ”ಎ’ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆಗೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ ಈಗ ನಿಗದಿಪಡಿಸಿರುವ ಹೊಸ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆಗೆ ನಿಗದಿಪಡಿಸಲಾಗಿದೆ. ಎರಡು ವರ್ಷಗಳಿಂದ ಅ ಧಿಕಾರವಿಲ್ಲದೆ ಕೇವಲ ಪುರಸಭೆಗೆ ಬಂದು ಹೋಗುತ್ತಿದ್ದ ಎಲ್ಲಾ 12 ಸದಸ್ಯೆಯರು ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಥಮ ಪುರಸಭೆ ನಡೆದ ದಿನಾಂಕದ ಆಧಾರದ ಪ್ರಕಾರ ಈಗಿನ ಸದಸ್ಯರ ಅವ ಧಿ ಇನ್ನು ಕೇವಲ 7 ರಿಂದ 8 ತಿಂಗಳು ಮಾತ್ರ ಇದೆ. ಈ ಕಡಿಮೆ ಅವಧಿಗೆ ಅಧಿಕಾರ ಪಡೆಯಲು ಯಾರೂ ಅಷ್ಟೊಂದು ಉತ್ಸಾಹತೋರುತ್ತಿಲ್ಲ. ಜೆಡಿಎಸ್‌ಮತ್ತು ಬಿಜೆಪಿ ಪಕ್ಷಗಳು ಹಿಂದಿನ ಒಡಂಬಡಿಕೆಯಂತೆ ನಡೆದುಕೊಂಡರೆಬಿಜೆಪಿಗೆ ಅಧ್ಯಕ್ಷ ಸ್ಥಾನ ಮತ್ತು ಜೆಡಿಎಸ್ ಉಪಾಧ್ಯಕ್ಷ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯ ಬಗ್ಗೆಯೂ ಚರ್ಚೆನಡೆಯುತ್ತಿದೆ. ಆದರೆ ಆಯಾ ಪಕ್ಷಗಳ ವರಿಷ್ಠರನಿರ್ಧಾರದ ಮೇಲೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಿರ್ಧಾರವಾಗಲಿದೆ.