Advertisement

ಮಹಿಳೆಯರು ಮತ್ತು ಮಾನಸಿಕ ಆರೋಗ್ಯ

01:47 PM May 09, 2021 | Team Udayavani |

ಬಂಜೆತನ ಮತ್ತು ಶಿಶುಮರಣ

Advertisement

ಬಂಜೆತನ ಹಾಗೂ ಗರ್ಭಸ್ರಾವ, ಗರ್ಭಪಾತಗಳು ಅನೇಕ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೆಲವರಿಗೆ ಇದರಿಂದ ತಾಯಿಯಾಗುವ ಬಯಕೆ ಈಡೇರುವುದಿಲ್ಲ. ಶಿಶು ಗರ್ಭದಲ್ಲಿಯೇ ಮರಣ ಹೊಂದುವುದು ಮತ್ತು ಜನಿಸಿದ ಬಳಿಕ ಸಾವನ್ನಪ್ಪುವುದು ತಾಯಿಯಾಗುವ ಬಲವಾದ ಆಶೆ ಹೊಂದಿರುವ ಮಹಿಳೆಯ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ.

ಗರ್ಭಧಾರಣೆ, ಮಗುವನ್ನು ಹೆರುವುದು ಮತ್ತು ತಾಯ್ತನ

ಗರ್ಭಧಾರಣೆಯ ಸಂದರ್ಭದಲ್ಲಿ ಮತ್ತು ಮಗುವನ್ನು ಹೆತ್ತ ಬಳಿಕ ಮಹಿಳೆಯರು ಖನ್ನತೆ ಮತ್ತು ಉದ್ವಿಗ್ನತೆಗೆ ಒಳಗಾಗುವುದು ಅಸಹಜವೇನಲ್ಲ. ಜಾಗತಿಕವಾಗಿ ಶೇ. 10ರಷ್ಟು ಗರ್ಭಿಣಿಯರು ಮತ್ತು ಈಗಷ್ಟೇ ಶಿಶುವಿಗೆ ಜನ್ಮ ನೀಡಿರುವ ಮಹಿಳೆಯರಲ್ಲಿ ಶೇ. 13ರಷ್ಟು ಮಂದಿ ಮಾನಸಿಕ ಸಮಸ್ಯೆ, ಅದರಲ್ಲೂ ಖನ್ನತೆಯನ್ನು ಅನುಭವಿಸುತ್ತಾರೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಭಾರತೀಯ ಮಹಿಳೆಯ

ರಲ್ಲಿ ಶೇ. 22ರಷ್ಟು ಮಂದಿ ಪ್ರಸವೋತ್ತರ ಖನ್ನತೆಗೆ ತುತ್ತಾಗುತ್ತಾರೆ.

Advertisement

ಗರ್ಭಧಾರಣೆ, ತಾಯ್ತನವನ್ನು ಅನುಭವಿಸುವ ಅನೇಕ ಮಹಿಳೆಯರಲ್ಲಿ ಉದ್ವಿಗ್ನತೆ ಸಾಮಾನ್ಯವಾಗಿರು ತ್ತದೆ ಎಂದು ಅಂದಾಜಿಸಲಾಗಿದೆ. ಬದುಕಿನ ಈ ಮಹತ್ತರ ಬದಲಾವಣೆಗೆ ಹೊಂದಿ ಕೊಳ್ಳುವುದು ಮತ್ತು ತಾಯ್ತನದ ಆರಂಭದಲ್ಲಿ ಅದರ ದೈನಿಕ ಸವಾಲುಗಳನ್ನು ಎದುರಿ ಸುವುದು ಅನೇಕ ಮಹಿಳೆಯರು ಖನ್ನತೆ ಮತ್ತು ಉದ್ವಿಗ್ನತೆಯನ್ನು ಅನುಭವಿಸುವಂತೆ ಮಾಡುತ್ತದೆ. ಈ ಹಿಂದೆಯೇ ಅವರು ಖನ್ನತೆ ಮತ್ತು ಉದ್ವಿಗ್ನತೆಗೆ ಒಳಗಾಗಿದ್ದಲ್ಲಿ ಈ ಸಾಧ್ಯತೆ ಇನ್ನಷ್ಟು ಹೆಚ್ಚಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next