Advertisement

ಶೇ.7ರಷ್ಟು ಮಹಿಳೆಯರು ಮಾತ್ರ ಪೊಲೀಸ್‌ ಪಡೆಯಲ್ಲಿ: ವರದಿ

09:51 AM Nov 10, 2019 | Hari Prasad |

ಹೊಸದಿಲ್ಲಿ: ದೇಶದ ಪೊಲೀಸ್‌ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲು ಶೇ.7ರಷ್ಟು ಮಾತ್ರ ಎಂದು ‘ದ ಇಂಡಿಯಾ ಜಸ್ಟಿಸ್‌ ರಿಪೋರ್ಟ್‌ 2019’ರಲ್ಲಿ ಉಲ್ಲೇಖೀಸಲಾಗಿದೆ. 24 ಲಕ್ಷ ಪೊಲೀಸರ ಸಂಖ್ಯೆಯಲ್ಲಿ ಕೇವಲ ಶೇ.7ರಷ್ಟು ಮಹಿಳೆಯರು ಮಾತ್ರ ಅಧಿ ಕಾರಿಗಳ ಹುದ್ದೆಯಲ್ಲಿದ್ದಾರೆ. ಸೆಂಟರ್‌ ಫಾರ್‌ ಸೋಷಿಯಲ್‌ ಜಸ್ಟಿಸ್‌, ಟಾಟಾ ಇನ್ಸ್ಟಿಟ್ಯೂಟ್‌ ಆಫ್ ಸೋಶಿ ಯಲ್‌ ಸೈನ್ಸಸ್‌, ಕಾಮನ್‌ ಕಾಸ್‌, ಕಾಮನ್ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿ ಶಿಯೇಟಿವ್‌, ದಕ್ಷ್ ನ ಪರಿಣಿತರು ಈ ವರದಿ ಸಿದ್ಧಪಡಿಸಿದ್ದಾರೆ.

Advertisement

‘ವಿವಿಧ ರಾಜ್ಯಗಳು ಪೊಲೀಸ್‌ ಪಡೆಗೆ ತೃಪ್ತಿದಾಯಕವಾಗಿರುವ ಪ್ರಮಾಣದಲ್ಲಿ ಅಂದರೆ ಶೇ.1ರಷ್ಟು ಪ್ರಮಾಣದಲ್ಲಿ ಮಹಿಳೆಯರನ್ನು ನೇಮಿಸಿಕೊಂಡರೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ನೇಮಕ ಆದಂತಾಗುತ್ತದೆ. ಈ ಮೂಲಕ ವಿವಿಧ ಸಂಸ್ಥೆ ಗಳಲ್ಲಿ ಶೇ.33ರಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಮೀಸಲು ನೀಡಬೇಕು ಎಂಬ ದಶಕಗಳ ಒತ್ತಾಯ ಕೂಡ ಈಡೇರಿದಂತಾಗುತ್ತದೆ’ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ, ಗುಜರಾತ್‌ ಮತ್ತು ಮೇಘಾಲಯ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಐದರಲ್ಲಿ ನಾಲ್ಕು ಪ್ರಕರಣಗಳು ಐದು ವರ್ಷಗಳಿಂದ ವಿಚಾರಣೆ ಇಲ್ಲದೆ ಬಾಕಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next