Advertisement

ಉತ್ತರ ಪ್ರದೇಶ : ಪತಿಯ ಕೊಂದ ಪತ್ನಿಯ ಪ್ರಿಯಕರ ಅರೆಸ್ಟ್‌

04:35 PM Dec 18, 2018 | Team Udayavani |

ಮುಜಫ‌ರನಗರ, ಉತ್ತರ ಪ್ರದೇಶ : ಆರು ತಿಂಗಳ ಹಿಂದೆ ಪತಿಯನ್ನು ಕೊಂದ ಪತ್ನಿಯ ಪ್ರಿಯಕರನನ್ನು ಪೊಲೀಸರು ಶಾಮ್ಲಿ ಜಿಲ್ಲೆಯಲ್ಲಿ ಬಂಧಿಸಿರುವುದು ವರದಿಯಾಗಿದೆ.

Advertisement

ಈ ವರ್ಷ ಜೂನ್‌ ನಲ್ಲಿ  ಕೊಲೆ ಆರೋಪಿ ಪ್ರದೀಪ್‌, ಧರ್ಮವೀರ್‌ ಸಿಂಗ್‌ ನನ್ನು ಆತನ ಪತ್ನಿಯ ಜತೆ ಸೇರಿ ಕತ್ತು ಹಿಸುಕಿ ಕೊಂದು ಬಳಿಕ ಆತನ ಶವವನ್ನು ಸೀಲಿಂಗ್‌ ಫ್ಯಾನಿಗೆ ನೇತು ಹಾಕಿ ಆತ್ಮಹತ್ಯೆ ಪ್ರಕರಣವೆಂದು ಬಿಂಬಿಸಲು ಯತ್ನಿಸಿದ್ದ. 

ತನ್ನ ಪತ್ನಿ ಮತ್ತು ಪ್ರದೀಪ್‌ ನಡುವಿನ ಅನೈತಿಕ ಸಂಬಂಧವನ್ನು ಧರಮ್‌ವೀರ್‌ ಸಿಂಗ್‌ ತೀವ್ರವಾಗಿ  ಆಕ್ಷೇಪಿಸಿದ್ದ. ಅದಕ್ಕಾಗಿ ಆತನನ್ನು ಕೊಂದು ಮುಗಿಸುವ ಸಂಚನ್ನು ಆರೋಪಿ ಪ್ರದೀಪ್‌ ಮತ್ತು ಧರಮ್‌ವೀರ್‌ನ ಪತ್ನಿ ಕಾರ್ಯಗತಗೊಳಿಸಿದ್ದರು ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ.

ಪೊಲೀಸರು ಆರೋಪಿ ಪ್ರದೀಪ್‌ ನನ್ನು  ಗರೀ ಪುಕ್ತಾ ವ್ಯಾಪ್ತಿಗೆ ಒಳಪಟ್ಟ  ಮಲೈಂದಿ ಗ್ರಾಮದಲ್ಲಿ ಸೆರೆ ಹಿಡಿದರು. ಆತನ ಪ್ರಿಯತಮೆಯಾಗಿರುವ ಮೃತ ಧರಮ್‌ವೀರ್‌ ನ ಪತ್ನಿ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಪೊಲೀಸರು ಆಕೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next