Advertisement

ವೆಜ್‌ ಪಿಜ್ಜಾ ಬದಲು ನಾನ್‌-ವೆಜ್‌ ಪಿಜ್ಜಾ: 1 ಕೋಟಿ ರೂ. ಪರಿಹಾರಕ್ಕೆ ಮೊರೆ!

09:22 AM Mar 14, 2021 | Team Udayavani |

ನವದೆಹಲಿ: ತಾವು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿದ್ದ ವೆಜ್‌ ಪಿಜ್ಜಾ ಬದಲಿಗೆ, ನಾನ್‌ ವೆಜ್‌ ಪಿಜ್ಜಾ ಕಳುಹಿಸಿದ್ದಾರೆಂದು ಆರೋಪಿಸಿರುವ ದೀಪಾಲಿ ತ್ಯಾಗಿ ಎಂಬ ಮಹಿಳೆ 1 ಕೋಟಿ ರೂ. ಪರಿಹಾರಕ್ಕೆ ಮೊರೆ ಹೋಗಿದ್ದಾರೆ.

Advertisement

ನಾನ್ ವೆಜ್ ಪಿಜ್ಜಾ ಕಳುಹಿಸಿದ ತಪ್ಪಿಗಾಗಿ ತಮಗೆ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವಾಸವಾಗಿರುವ ದೀಪಾಲಿ ಪಿಜ್ಜಾ ಔಟ್‌ಲೆಟ್‌ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಅಂಬಾನಿ ಮನೆಮುಂದೆ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಬಂಧನ

“ಮಾ. 21ರಂದು ನಾನು ಅಮೆರಿಕನ್‌ ಪಿಜ್ಜಾ ಔಟ್‌ಲೆಟ್‌ನಲ್ಲಿ ಆನ್‌ಲೈನ್‌ ಮೂಲಕ ವೆಜ್‌ ಪಿಜ್ಜಾ ಆರ್ಡರ್‌ ಮಾಡಿದ್ದೆ. ಆದರೆ, ತಮಗೆ ವೆಜ್‌ ಪಿಜ್ಜಾ ಬದಲು ನಾನ್‌ ವೆಜ್‌ ಪಿಜ್ಜಾ ಕಳುಹಿಸಲಾಗಿತ್ತು. ತುಂಬಾ ಹಸಿವಾಗಿದ್ದರಿಂದ ಇದನ್ನರಿಯದೇ ಪಿಜ್ಜಾ ತಿಂದಿದ್ದು, ಹುಟ್ಟಿನಿಂದಲೂ ಶುದ್ಧ ಸಸ್ಯಾಹಾರಿಯಾದ ನನ್ನ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ. ಹಾಗಾಗಿ, ನನಗೆ 1 ಕೋಟಿ ರೂ. ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next