Advertisement
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್ (56 ವರ್ಷ) ಎಂದು ಗುರುತಿಸಲಾಗಿದ್ದು, ಈಕೆ ಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ನ ಉಪನಗರ ನಿವಾಸಿಯಾಗಿದ್ದಾರೆ ಎನ್ನಲಾಗಿದೆ.
Related Articles
Advertisement
ವರಸೆ ಬದಲಿಸಿದ ಮಹಿಳೆ:ಇತ್ತ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಣೆ ಮಾಡಿದ ಬೆನ್ನಲ್ಲೇ ಮಹಿಳೆ ತಾನು ತನ್ನ ಮನೆಯಲ್ಲಿದ್ದ ಹಳೆಯ ದೇವರ ಫೋಟೋಗಳನ್ನು ನೀರಿಗೆ ಬಿಡಲು ಇಲ್ಲಿಗೆ ಬಂದಿದ್ದು ಹಾಗಾಗಿ ಸೇತುವೆಯ ದಂಡೆಯ ಮೇಲೆ ಕುಳಿತು ದೇವರ ಪ್ರಾರ್ಥನೆ ಮಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದೆ ಎಂದು ಹೇಳಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಕಮಿಷನರ್ ಮೆಚ್ಚುಗೆ:
ಅಟಲ್ ಸೇತುನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ತಕ್ಷಣ ಸ್ಪಂದಿಸಿದ ಕರ್ತವ್ಯ ನಿರತ ಅಧಿಕಾರಿಗಳಾದ ಲಲಿತ್ ಶಿರಸತ್, ಕಿರಣ್ ಮಹ್ತ್ರೆ, ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ಅವರ ಕಾರ್ಯ ಶ್ಲಾಘನೀಯ ಎಂದು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ‘X’ ನಲ್ಲಿನ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Vinesh Phogat: ಹೋರಾಟ ಮುಂದುವರಿಯುತ್ತದೆ..; ಕುತೂಹಲ ಮೂಡಿಸಿದ ಪೋಗಾಟ್ ಪತ್ರ