Advertisement

ಸಮಾಜವಾದಿ ಪಕ್ಷದ ಮಹಿಳಾ ನಾಯಕಿಯ ಕುತ್ತಿಗೆ ಸೀಳಿ ಕೊಲೆ

03:42 PM Jan 05, 2017 | udayavani editorial |

ಕಾನ್ಪುರ : ಕುತ್ತಿಗೆ ಸೀಳಿ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಮಹಿಳಾ ನಾಯಕಿಯೋರ್ವರ ಶವವು ಪತ್ತೆಯಾಗಿದೆ.

Advertisement

ಭೂವಿವಾದದಲ್ಲಿ ಆಕೆಯನ್ನು ಆಕೆಯ ನೆರೆಯಲ್ಲಿರುವ ಆಕೆಯ ಇಬ್ಬರು ಸಹೋದರರೇ ಕೊಲೆಗೈದಿರುವರೆಂದು  ಆಕೆಯ ಕುಟುಂಬದವರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಮಾನುಷವಾಗಿ ಕೊಲೆಗೀಡಾಗಿರುವ ಎಸ್‌ಪಿ ಮಹಿಳಾ ನಾಯಕಿಯನ್ನು ರಾಧಾ ದೇವಿ (55) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆಗೆ ಮರಳಿದ ಆಕೆ ಶವವಾಗಿ ಪತ್ತೆಯಾಗಿರುವಳೆಂದು ಬಬುಪುರ್ವ ಪೊಲೀಸ್‌ ಠಾಣೆಯ ಸರ್ಕಲ್‌ ಆಫೀಸರ್‌ ರಮೇಶ್‌ ದುಬೆ ತಿಳಿಸಿದ್ದಾರೆ. 

ರಾಧಾ ದೇವಿ ಅವರ ಕುಟುಂಬದವರು ಕೊಟ್ಟಿರುವ ದೂರಿನ ಪ್ರಕಾರ ನೆರೆಯಲ್ಲಿರುವ ಆಕೆಯ ಸಹೋದರರಾದ ಅಖೀಲೇಶ್‌ ಮತ್ತು ಸಂದೀಪ್‌ ಎಂಬವರೇ ಭೂವಿವಾದದಲ್ಲಿ  ಈ ಕೊಲೆ ಕೃತ್ಯ ಎಸಗಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರನ್ನು ಪ್ರಶ್ನಿಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next