ಮುಂಬಯಿ: ರೈಲ್ವೇ ಸ್ಟೇಷನ್ ನಲ್ಲಿ ಹಾಡು ಹಾಡಿ ಭಿಕ್ಷುಕಿಯೊಬ್ಬಳು ರಾತ್ರೋ ರಾತ್ರಿ ವೈರಲ್ ಆಗಿದ್ದನ್ನು ನೋಡಿದ್ದೇವೆ. ಕಡಲೆ ಕಾಯಿಯನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ ʼಕಚ್ಚಾ ಬಾದಮ್ʼ ಹಾಡಿದ್ದನ್ನು ವೈರಲ್ ಆಗಿದ್ದನ್ನು ಕೂಡ ನೋಡಿದ್ದೇವೆ.
ಈಗ ಇದೇ ಮಾದರಿಯಲ್ಲಿ ಮತ್ತೊಬ್ಬ ಮಹಿಳೆ ಹಾಡಿರುವ ಹಾಡು ಇಂಟರ್ ನೆಟ್ ಸದ್ದು ಮಾಡುತ್ತಿದೆ. ಲತಾ ಮಂಗೇಶ್ಕರ್ ಹಾಡಿರುವ ʼಸುನೋ ಸಜ್ಞಾ ಪಾಪಿಹೇ ನೇʼ ಹಾಡನ್ನು ಹಾಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.
ಸಯ್ಯದ್ ಸಲ್ಮಾನ್ ಎನ್ನುವವರು ರಸ್ತೆಯಲ್ಲಿ ನಿಂತು ಮಹಿಳೆ ಹಾಡಿರುವ ಹಾಡನ್ನು ರೆಕಾರ್ಡ್ ಮಾಡಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಆಪ್ಲೋಡ್ ಮಾಡಿದ್ದಾರೆ. ಮಹಾರಾಷ್ಟ್ರದ ಮಹಾಬಲೇಶ್ವರದ ಪಾರ್ಸಿ ಪಾಯಿಂಟ್ ಪಂಚಾಗಲಿಯಲ್ಲಿ ನನಗೆ ಹೊಸ ಗಾಯಕರೊಬ್ಬರು ಸಿಕ್ಕಿದ್ದಾರೆ ಇವರ ಧ್ವನಿ ತುಂಬಾ ಅದ್ಭುತವಾಗಿದೆ ಇವರನ್ನು ಬೆಂಬಲಿಸಿ ಎಂದಿದ್ದಾರೆ.
ಇದುವರೆಗೆ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇಂಥ ಪ್ರತಿಭೆಗೆ ಹ್ಯಾಟ್ಸಾಫ್ ಆಫ್ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ʼಸುನೋ ಸಜ್ಞಾ ಪಾಪಿಹೇ ನೇʼ ಹಾಡು 1996 ರಲ್ಲಿ ʼಆಯೆ ದಿನ್ ಬಹಾರ್ ಕೆʼ ಸಿನಿಮಾದ ಸೂಪರ್ ಹಿಟ್ ಹಾಡು. ಧರ್ಮೇಂದ್ರ, ಆಶಾ ಪರೇಖ್ ಸಿನಿಮಾದಲ್ಲಿ ನಟಿಸಿದ್ದರು.