Advertisement

MBBS ಸೀಟ್‌ ಪಡೆಯಲು ವಿಫ‌ಲಳಾದ ಪತ್ನಿಯನ್ನು ಸುಟ್ಟು ಕೊಂದ!

09:37 AM Sep 19, 2017 | |

ಹೈದರಾಬಾದ್‌ : ಇಲ್ಲಿ ನಡೆದ ಆಘಾತಕಾರಿ ವಿದ್ಯಮಾನವೊಂದರಲ್ಲಿ ಮೆಡಿಕಲ್‌ ಸೀಟ್‌ ಪಡೆಯಲು ವಿಫ‌ಲವಾದ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದ ಆರೋಪದಲ್ಲಿ  ಟೆಕ್ಕಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಎಎನ್‌ಐ ವರದಿಯಂತೆ ಹರಿಕಾ ಎಂಬ ವಿವಾಹಿತೆ ಎಂಬಿಬಿಎಸ್‌ ಸೀಟ್‌ ಪಡೆಯಲು ವಿಫ‌ಲವಾಗಿದ್ದು ಕುಪಿತನಾದ ಪತಿ  ರಿಷಿ ಕುಮಾರ್‌ ಆಕೆಯನ್ನು ಬೆಂಕಿ ಹಚ್ಚಿ ಸುಟ್ಟು ಅಮಾನುಷವಾಗಿ ಹತ್ಯೆಗೈದಿದ್ದಾನೆ. ಈ ಬಗ್ಗೆ ಹರಿಕಾ ಪೋಷಕರು ಎಲ್‌ಬಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

 2 ವರ್ಷಗಳ ಹಿಂದೆ ಇಬ್ಬರ ವಿವಾಹವಾಗಿತ್ತು .ರಿಷಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಮಾತ್ರವಲ್ಲದೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೋಷಕರ ಸಮೇತ ರಿಷಿಯನ್ನು  ವಶಕ್ಕೆ ಪಡೆದಿದ್ದಾರೆ. ನಾನು ಪತ್ನಿಯನ್ನು ಕೊಲೆಗೈದಿಲ್ಲ, ಆಕೆಯೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಿಷಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next