Advertisement

ಮನೆಯ ಛಾವಣಿ ಕುಸಿದು ಮಹಿಳೆ ಸಾವು

01:07 PM Aug 13, 2020 | keerthan |

ರಾಯಚೂರು: ಜಿಟಿ ಜಿಟಿ ಮಳೆಯಿಂದ ನೆನೆದ ಕಾರಣ ಮನೆಯ ಛಾವಣಿ ಕುಸಿದು ಬಿದ್ದು, ಮಹಿಳೆ ಮೃತಪಟ್ಟಿದ್ದಾಳೆ. ಮಾನವಿಯ ಕಬ್ಬೇರ ಬಡಾವಣೆಯಲ್ಲಿ ಬುಧವಾರ ಸಂಜೆ ದುರ್ಘಟನೆ ಸಂಭವಿಸಿದೆ.

Advertisement

ಮರೀಯಮ್ ಬೀ (47) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಮನೆ ಸಂಪೂರ್ಣ ನೆನೆದಿತ್ತು. ವಾರದ ಹಿಂದೆ ಮನೆಯ ಒಂದು ಭಾಗ ಕುಸಿದಿತ್ತು. ಆದರೂ ಮಹಿಳೆ ಅದೇ ಹಳೆ ಮನೆಯಲ್ಲಿ ವಾಸಿಸುತ್ತಿದ್ದಳು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.

ಗಂಭೀರ ಗಾಯಗೊಂಡ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಫಲಕಾರಿಯಾಗಿಲ್ಲ. ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next