Advertisement

ಮುಜಫ‌ರನಗರ: ನೆರೆಮನೆ ವ್ಯಕ್ತಿಯಿಂದ ಮಹಿಳೆಯ ಅತ್ಯಾಚಾರ

11:26 AM Oct 17, 2018 | udayavani editorial |

ಮುಜಫ‌ರನಗರ : ಜಿಲ್ಲೆಯ ಕಕ್ರೋಲಿ ಗ್ರಾಮದಲ್ಲಿ 24ರ ಹರೆಯದ ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ನಿದ್ರಿಸಿಕೊಂಡಿದ್ದ ವೇಳೆ ಮನೆಗೆ ನುಗ್ಗಿದ ನೆರೆ ಮನೆಯ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮಹಿಳೆಯು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ  “ನನ್ನ ಮನೆಗೆ ರಾತ್ರಿ ವೇಳೆ ನುಗ್ಗಿದ ನೆರೆಮನೆಯ ಕಾಮಾಂಧ ವ್ಯಕ್ತಿಯು ನನಗೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಸಮೀಪದ ಅಡವಿಗೆ ನನ್ನನ್ನು ಬಲವಂತವಾಗಿ ಒಯ್ದು ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ. ವಿಷಯವನ್ನು ಪೊಲೀಸರಿಗೆ ಅಥವಾ ಬೇರೆ ಯಾರಿಗಾದರೂ ತಿಳಿಸಿದಲ್ಲಿ ಪರಿಣಾಮ ಗಂಭೀರವಾದೀತು ಎಂಬ ಬೆದರಿಕೆಯನ್ನೂ ಒಡ್ಡಿದ’ ಎಂದು ಹೇಳಿದ್ದಾಳೆ. 

ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ; ಅತ್ಯಾಚಾರದ ಕೇಸನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಯು ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು ಆತನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next