Advertisement

ಹಳೆಯಂಗಡಿ: ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

07:15 PM Aug 04, 2022 | Team Udayavani |

ಹಳೆಯಂಗಡಿ: ಮಾನಸಿಕವಾಗಿ ನೊಂದು ಮಹಿಳೆಯೋರ್ವರು ಪಾವಂಜೆ ಬಳಿಯ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.

Advertisement

ಹಳೆಯಂಗಡಿ ಲೈಟ್‌ಹೌಸ್‌ ಬಳಿಯ ನಿವಾಸಿ ನರ್ಸಿ (70) ಮೃತ ಮಹಿಳೆ. ಅವರು ಕಳೆದ ಕೆಲವು ತಿಂಗಳಿನಿಂದ ಮಾನಸಿಕವಾಗಿ ನೊಂದು ಖನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಹೇಳಿದ್ದಾರೆ ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.

ನರ್ಸಿ ಅವರ ಶವವು ಪಡುಪಣಂಬೂರು ಗ್ರಾಮ ಪಂಚಾಯತ್‌ನ ಹೊಗೆಗುಡ್ಡೆ ಬಳಿಯ ನಂದಿನಿ ನದಿಯ ತೀರದಲ್ಲಿ ಮಧ್ಯಾಹ್ನ ಪತ್ತೆಯಾಗಿತ್ತು. ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಅವರ ಗಮನಕ್ಕೆ ಸ್ಥಳೀಯರು ತಂದಿದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ಬಾರಿ ಪ್ರಯತ್ನ:

ಮಾನಸಿಕವಾಗಿ ನೊಂದಿದ್ದ ನರ್ಸಿ ಅವರು ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಒಮ್ಮೆ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಬುಧವಾರ ರಾತ್ರಿ ತಮ್ಮ ಕೋಣೆಯಲ್ಲಿ ಮಲಗಿದ್ದ ನರ್ಸಿ ಅವರು ಬೆಳಗ್ಗೆಯಿಂದ ಕಾಣೆಯಾಗಿದ್ದರು. ಮಧ್ಯಾಹ್ನ ಅವರ ಶವ ಪತ್ತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next