Advertisement

ಗಂಗೊಳ್ಳಿ: ಹೊಟ್ಟೆ ನೋವು: ವಿವಾಹಿತೆ ಸಾವು

09:01 PM Sep 15, 2022 | Team Udayavani |

ಗಂಗೊಳ್ಳಿ: ವಿಪರೀತ ಹೊಟ್ಟೆ ನೋವು, ವಾಂತಿ, ಬೇಧಿಯಿಂದ ವಿವಾಹಿತೆ ಸಾವನ್ನಪ್ಪಿದ ಘಟನೆ ಗಂಗೊಳ್ಳಿಯಲ್ಲಿ ಸಂಭವಿಸಿದೆ.

Advertisement

ಗಂಗೊಳ್ಳಿಯ ನಿವಾಸಿ ಅಲ್ಫಿನಾ ಇರ್ಷಾದ್‌ ಶೇಖ್‌ (27) ಸಾವನ್ನಪ್ಪಿದವರು. ಅವರಿಗೆ ಗಂಗೊಳ್ಳಿಯ ಗುಡ್ಡೆಹೌಸ್‌ ನಿವಾಸಿ ಮೊಹಮ್ಮದ್‌ ಜಾಹೀದ್‌ ಅವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿತ್ತು. ಅವರು ಬಹರೈನ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಸೆ. 14ರ ಸಂಜೆ 7 ಗಂಟೆಗೆ ತನ್ನ ಗಂಡನ ಮನೆಯಲ್ಲಿದ್ದ ಅಲ್ಫಿನಾ ಅವರಿಗೆ ವಿಪರೀತ ಹೊಟ್ಟೆ ನೋವು, ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಕೂಡಲೇ ಅವರ ಅತ್ತೆ ಫೌಜಿಯಾ ಬಾನು ಅವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸೆ. 15ರ ಬೆಳಗ್ಗೆ 8.30ರ ವೇಳೆಗೆ ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಸಹೋದರ ಅಬ್ದುಲ್‌ ಖಾದಿರ್‌ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next