Advertisement

5 ಲಕ್ಷ ಇನಾಮು ಹೊಂದಿದ್ದ ಮಹಿಳಾ ನಕ್ಸಲ್‌ ಪೊಲೀಸ್‌ ಗುಂಡಿಗೆ ಬಲಿ

11:59 AM Jul 18, 2018 | Team Udayavani |

ರಾಯಪುರ, ಛತ್ತೀಸ್‌ಗಢ : ತನ್ನ ತಲೆಗೆ 5 ಲಕ್ಷ ರೂ. ಇನಾಮು ಹೊಂದಿದ್ದ  ನಕ್ಸಲ್‌ ಮಹಿಳೆಯನ್ನು ಭದ್ರಾ ಪಡೆಗಳು ಛತ್ತೀಸ್‌ಗಢದ ರಾಜನಂದನಗಾಂವ್‌ ಜಿಲ್ಲೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. 

Advertisement

ಮಾವೋ ನಿಗ್ರಹ ಕಾರ್ಯಾಚರಣೆಗಾಗಿ ಇಂಡೋ ಟಿಬೆಟಾನ್‌ ಪೊಲೀಸ್‌ ಪಡೆ ಮತ್ತು ಜಿಲ್ಲಾ ಪೊಲೀಸ್‌ ದಳ ಜಂಟಿಯಾಗಿ ಕೊಂಡಾಲ್‌ ಬೆಟ್ಟಗಳಿಗೆ ಸಮೀಪದ ಅರಣ್ಯದಲ್ಲಿ  ಇಂದು ಬೆಳಗ್ಗೆ  8.30ರ ಸುಮಾರಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳಾ ನಕ್ಸಲ್‌ ಹತಳಾದಳು ಎಂದು ಎಸ್‌ಪಿ ಪ್ರಶಾಂತ್‌ ಅಗ್ರವಾಲ್‌ ತಿಳಿಸಿದ್ದಾರೆ. 

ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿ ಭದ್ರತಾ ಪಡೆ ಸಿಬಂದಿಗಳ ಮೇಲೆ ಮಾವೋ ಉಗ್ರರು ಗುಂಡು ಹಾರಿಸಿದ ಕಾರಣ ನಡೆದ ಎನ್‌ಕೌಂಟರ್‌ನಲ್ಲಿ  ಹತಳಾದ ನಕ್ಸಲ್‌ ಮಹಿಳೆಯನ್ನು ಝರೀನಾ ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next