Advertisement

ಮಾಸ್ಕ್ ಹಾಕದವರಿಗೆ ಮಹಿಳಾ ಮಾರ್ಷಲ್‌ ಗಳಿಂದ ದಂಡ !

06:13 PM Mar 08, 2021 | Team Udayavani |

ಬೆಂಗಳೂರು : ನಗರದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ಮೇಲೆ ಕ್ರಮ ಕೈಗೊಳ್ಳಲು ನಗರದ ಚರ್ಚ್‌ಸ್ಟ್ರೀಟ್ ‌ನಲ್ಲಿ ಪ್ರಾಯೋಗಿಕವಾಗಿ ಐದು ಜನ ಮಹಿಳಾ ಮಾರ್ಷಲ್‌ ಗಳನ್ನು ಪಾಲಿಕೆ ನೇಮಕ ಮಾಡಲಾಗಿದೆ.

Advertisement

ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಾಯೋಗಿಕವಾಗಿ ಮಹಿಳಾ ಮಾರ್ಷಲ್‌ ಗಳನ್ನು ನೇಮಿಸಲಾಗಿದ್ದು, ಇಲ್ಲಿ ಯಶಸ್ವಿಯಾದರೆ ನಗರದ ಉಳಿದ ಭಾಗದಲ್ಲೂ ಮಹಿಳಾ ಮಾರ್ಷಲ್‌ ಗಳನ್ನು  ನೇಮಿಸಲು ಉದ್ದೇಶಿಸಲಾಗಿದೆ.

ಚರ್ಚ್‌ಸ್ಟ್ರೀಟ್‌ನಲ್ಲಿ ವಾರಾಂತ್ಯದಲ್ಲಿ ವಾಹನ ಸಂಚಾರ ನಿಷೇಧ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ.  ಈ ವೇಳೆ ಕೊರೊನಾ ನಿಯಮ ಉಲ್ಲಂಘನೆ ತಪ್ಪಿಸುವ ಉದ್ದೇಶದಿಂದ ಚರ್ಚ್ ಸ್ಟ್ರೀಟ್‌ನಲ್ಲಿ ಐದು ಜನ ಮಹಿಳಾ ಮಾರ್ಷಲ್‌ ಗಳನ್ನು ಎರಡು ಪಾಳಿಯಲ್ಲಿ ನೇಮಿಸಲಾಗಿದ್ದು, ಇವರೊಂದಿಗೆ ಒಬ್ಬರು ಪುರುಷ ಮಾರ್ಷಲ್ ಸಹ ಇರಲಿದ್ದಾಾರೆ ಎಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next