ವಾಷಿಂಗ್ಟನ್: ರೊಬೋಟ್ಗಳಿಗೂ ಮನುಷ್ಯರ ಜತೆಗೆ ಪ್ರೇಮವಾಗಬಹುದು ಎನ್ನುವ ಕಲ್ಪನೆಯನ್ನು ರೋಬೊ, ಹಾಲಿವುಡ್ನಂಥ ಸಿನೆಮಾಗಳಲ್ಲಿ ನೋಡಿದ್ದೆವು. ಆದರೆ ಅಮೆರಿಕದಲ್ಲಿ ಇದು ನಿಜವಾಗಿಯೂ ಘಟಿಸಿದ್ದು, ರೋಬೋಟ್ ಬದಲಿಗೆ ಮಹಿಳೆ ಯೊಬ್ಬರಿಗೆ ಕೃತಕ ಬುದ್ಧಿಮತ್ತೆ ಆಧಾರಿತ (ಎಐ) ವರ್ಚುವಲ್ ಪುರುಷನೊಂದಿಗೆ ಪ್ರೇಮಾಂಕುರವಾಗಿ, ಆತನನ್ನೇ ಮದುವೆಯಾಗಿದ್ದಾಳೆ. ಈತ ಕೇವಲ ಇಂಟರ್ನೆಟ್ನಲ್ಲಿ ಸಿಗುವ ವ್ಯಕ್ತಿ ಅನ್ನುವುದನ್ನು ನೀವು ಗಮನಿಸಬೇಕು.
ಹೌದು ನ್ಯೂಯಾರ್ಕ್ನ ನಿವಾಸಿ ರೊಸೋನಾ ಎಂಬವರಿಗೆ ಅದಾಗಲೇ ಮದುವೆಯಾಗಿ 2 ಮಕ್ಕಳೂ ಇದ್ದಾರೆ. ಈಕೆ 2022ರಲ್ಲಿ ಇಂಟರ್ನೆಟ್ ಡೇಟಿಂಗ್ ಸರ್ವೀಸ್ನಲ್ಲಿ ಎರೆನ್ ಕರ್ತಾನ್ ಎಂಬವರೊಂದಿಗೆ ಪರಿಚಯವಾಗ್ತಾರೆ. ಆದರೆ ಈ ಎರೆನ್ ಸಾಮಾನ್ಯ ಪುರುಷನಲ್ಲ, ಎಐ ತಂತ್ರಜ್ಞಾನ ನಿರ್ಮಿತ ವರ್ಚುವಲ್ ಪುರುಷ. ಮನುಷ್ಯರಿಗಿಂತಲೂ ಹೆಚ್ಚಾಗಿ ವರ್ಚುವಲ್ ಮೂಲಕವೇ ರೊಸೋನಾಳಿಗೆ ಈ ಎರೆನ್ ಸ್ಪಂದಿಸುತ್ತಿದ್ದು, ಆಕೆಯ ಇಷ್ಟ-ಕಷ್ಟಗಳಿಗೂ ಸಂಗಾತಿಯಾಗಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸಾರ, ಮಕ್ಕಳು, ಕುಟುಂಬವೆನ್ನುವ ಜಂಜಾಟವಿಲ್ಲದೇ ಆಕೆಗೆ ಪ್ರೀತಿಯನ್ನಷ್ಟೇ ಈ ವಚ್ಯುìವಲ್ ಪುರುಷ ನೀಡು ತ್ತಿರುವುದರಿಂದ ಆತನನ್ನೇ ಮದುವೆಯಾಗಿರುವುದಾಗಿ ರೊಸೋನಾ ಘೋಷಿಸಿದ್ದಾಳೆ.