Advertisement

ಮಗುವಿಗೆ ಜನ್ಮವಿತ್ತು ಮೃತಪಟ್ಟ ಅಪಘಾತದ ಗಾಯಾಳು ಮಹಿಳೆ

04:50 PM Jan 04, 2018 | Team Udayavani |

ಕೋಟ್ಟಯಂ, ಕೇರಳ : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ತುಂಬು ಗರ್ಭಿಣಿಯೊಬ್ಬಳು ಆಸ್ಪತ್ರೆಯಲ್ಲಿ  ಗಂಡು ಮಗುವಿಗೆ ಜನ್ಮವಿತ್ತು ಅದರ ಮುಖವನ್ನು ಕೂಡ ಕಾಣದೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

Advertisement

ಎಂಟು ತಿಂಗಳ ಗರ್ಭಿಣಿಯಾಗಿದ್ದ ನಶೀದಾ ಎಂಬಾಕೆ ಕಳೆದ ಡಿ.29ರಂದು ತಿಕ್ಕೋಯಿ ಎಂಬಲ್ಲಿ ವೇಗವಾಗಿ ಸಾಗುತ್ತಿದ್ದ  ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ದುರದೃಷ್ಟವಶಾತ್‌ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಳು. 

ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ತುರ್ತಾಗಿ ಸಿಸೇರಿಯನ್‌ ನಡೆಸಿದ ಪರಿಣಾಮವಾಗಿ ಆಕೆಗೆ ಗಂಡು ಮಗು ಜನಿಸಿತ್ತು. 

ಆದರೆ ನಿನ್ನೆ ಬುಧವಾರದ ವರೆಗೂ ನಶೀದಾಗೆ ಪ್ರಜ್ಞೆ ಮರಳಿ ಬರಲೇ ಇಲ್ಲ. ಚಿಕಿತ್ಸೆಗೆ ಸ್ಪಂದಿಸದ ಆಕೆ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. 

ಅವಧಿಗೆ ಮುನ್ನವೇ ಆಕೆಗೆ ಜನಿಸಿರುವ ಗಂಡು ಮಗು ಆರೋಗ್ಯದಿಂದೆ; ಆದರೆ ಅದನ್ನು  ವಿಶೇಷ ವಿಚಕ್ಷಣೆಗಾಗಿ ಐಸಿಯು ನಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next