Advertisement
ನಾವೂರು ಗ್ರಾಮದ ನಿವಾಸಿ ಸಂಜೀವ ಅವರ ಪತ್ನಿ ಕಮಲಾ (45)ಮೃತ ಮಹಿಳೆ.ದ್ವಿಚಕ್ರವಾಹನದಲ್ಲಿ ಅವರು ಸಹ ಸವಾರೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ತೋಟತ್ತಾಡಿ ಗ್ರಾಮದ ಮೂರ್ಜೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಮಗುಚಿ ಬಿದ್ದಿದೆ. ಕಮಲಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭಿರವಾಗಿ ಗಾಯಗೊಂಡಿದ್ದರು.
ಬೆಳ್ತಂಗಡಿ: ಬಳಂಜ ಗ್ರಾಮದ ಕರ್ಮಂದೊಟ್ಟುನಲ್ಲಿ, ದ್ವಿಚಕ್ರ ವಾಹನ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಪಾದಚಾರಿಗೆ ಢಿಕ್ಕಿಯಾಗಿದೆ. ಅಪಘಾತದಿಂದ ರಸ್ತೆಗೆ ಬಿದ್ದ ಬೆಳ್ತಂಗಡಿ ನಿವಾಸಿ ಸುಶೀಲಾ (55) ಅವರಿಗೆ ಗಾಯಗಳಾಗಿದೆ.
Related Articles
Advertisement
ಆಟೋ ಚಾಲಕ ಆತ್ಮಹತ್ಯೆಬೆಳ್ತಂಗಡಿ: ಕೊಕ್ಕಡ ಬರೆಂಗಾಯ ಕಲ್ಕುಡಗುಡ್ಡೆ ನಿವಾಸಿ ಅವಿನಾಶ್ (23) ಅವರು ಫೆ. 26ರಂದು ತಡ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಫೆ.27ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಅವಿನಾಶ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಳು ಅಕ್ರಮ ಸಾಗಾಟ
ಬೆಳ್ತಂಗಡಿ: ಹೊಸಂಗಡಿ ಗ್ರಾಮದಲ್ಲಿ ಟಿಪ್ಪರ್ ಲಾರಿಯನ್ನು, ಪಿಎಸ್‌ಐ ಶ್ರೀಶೈಲ್ ಡಿ.ಮುರಗೋಡ್ ಹಾಗೂ ಸಿಬಂದಿ ತಪಾಸಣೆ ನಡೆಸಿದಾಗ ಆರೋಪಿತ ಕಾಶಿಪಟ್ಣ ಗ್ರಾಮ ಬೆಳ್ತಂಗಡಿ ನಿವಾಸಿ ವಸಂತ (27) ಯಾವುದೇ ಪರವಾನಗಿ ಇಲ್ಲದೇ, ನದಿಯಿಂದ ಮರಳನ್ನು ಕಳವು ಮಾಡಿರುವುದಲ್ಲದೆ, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಟಿಪ್ಪರ್ ಲಾರಿಯನ್ನು ಮರಳಿನ ಸಮೇತ ಸ್ವಾಧೀನಪಡಿಸಿಕೊಂಡು, ಅರೋಪಿಯ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.