Advertisement

ಆರು ವರ್ಷಗಳಿಂದ ಗಂಡನ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದ ಪತ್ನಿ: ಬಂಧನ

09:17 AM Feb 07, 2022 | Team Udayavani |

ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯನ್ನು ತನ್ನ ಪತಿಯ ಆಹಾರಕ್ಕೆ ಮಾದಕವಸ್ತು ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಪತಿ ಸತೀಶ್ (38 ವ) ನೀಡಿದ ದೂರಿನ ಮೇರೆಗೆ ಆಶಾ ಸುರೇಶ್ (36 ವ) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ದಂಪತಿಗಳು 2006 ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ತನ್ನ ವ್ಯವಹಾರದಲ್ಲಿ ಕಷ್ಟಪಡುತ್ತಿದ್ದ ಸತೀಶ್, ನಂತರ ಐಸ್ ಕ್ರೀಮ್ ಉದ್ಯಮ ಆರಂಭಿಸಿದ್ದರು. 2012 ರಲ್ಲಿ, ದಂಪತಿಗಳು ಪಾಲಕ್ಕಾಡ್‌ನಲ್ಲಿ ತಮ್ಮ ಸ್ವಂತ ಮನೆಯನ್ನು ಖರೀದಿಸಿದರು.

ಆದರೆ ಆಶಾ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಜೊತೆ ಜಗಳವಾಡುತ್ತಿದ್ದಳು. ಸಮಯ ಕಳೆದಂತೆ, ಸತೀಶ್ ಅವರು ಬಳಹ ಸುಸ್ತಾಗುತ್ತಿದ್ದರು, ವೈದ್ಯರನ್ನು ಸಂಪರ್ಕಿಸಿದ ವೇಳೆ ಅವರು ಸಕ್ಕರೆ ಅಂಶ ಕಡಿಮೆಯಾಗಿರುವುದು ಸುಸ್ತಿಗೆ ಕಾರಣವಾಗಿರಬಹುದು ಎಂದು ಸಲಹೆ ನೀಡಿದ್ದರು. ಆದರೆ, ನಿರಂತರ ಔಷಧ ಸೇವಿಸಿದರೂ ಸತೀಶ್ ಆರೋಗ್ಯ ಸುಧಾರಿಸಿರಲಿಲ್ಲ.

2021ರ ಸೆಪ್ಟೆಂಬರ್ ನಂತರ ಸತೀಶ್ ಅವರು ಮನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿಕೊಂಡರು, ನಂತರ ಕ್ರಮೇಣ ಸತೀಶ್ ಆರೋಗ್ಯ ಸ್ಥಿತಿ ಸುಧಾರಿಸ ತೊಡಗಿತು. ಇದರಿಂದ ಅನುಮಾನಗೊಂಡು, ಆಶಾ ತನ್ನ ಆಹಾರಕ್ಕೆ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಪತ್ತೆಹಲು ಸತೀಶ್ ತನ್ನ ಸ್ನೇಹಿತನ ಸಹಾಯ ಕೇಳಿದ್ದ.

ಇದನ್ನೂ ಓದಿ:ಸಚಿವಾಕಾಂಕ್ಷಿಗಳಲ್ಲಿ ಕುತೂಹಲ; ಇಂದು ಸಿಎಂ ದಿಲ್ಲಿಗೆ

Advertisement

ಸತೀಶ್ ಸ್ನೇಹಿತ ಆಶಾಳನ್ನು ಸಂಪರ್ಕಿಸಿದಾಗ, ಅವಳು ಸತೀಶ್‌ ನ ಆಹಾರಕ್ಕೆ ಮಾದಕ ವಸ್ತುವೊಂದನ್ನು ಸೇರಿಸುತ್ತಿದ್ದ ವಿಚಾರ ಹೇಳಿದ್ದಳು. ಅಲ್ಲದೆ ಆಕೆ ವಾಟ್ಸಾಪ್‌ನಲ್ಲಿ ಅದರ ಚಿತ್ರವನ್ನೂ ಕಳುಹಿಸಿದ್ದಳು. ಇದರಿಂದ ಕುಪಿತನಾದ ಸತೀಶ್ ಮನೆಯೊಳಗಿನ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರ ಪ್ರಕಾರ, ಸತೀಶ್ ಕಚೇರಿಗೆ ಕೊಂಡೊಯ್ಯುತ್ತಿದ್ದ ಆಹಾರ ಮತ್ತು ನೀರಿಗೂ ಸಹ ಪತ್ನಿ ಡ್ರಗ್ ಬೆರೆಸಿದ್ದಳು. ಸತೀಶ್ ತನ್ನ ಆಸ್ತಿಯಿಂದ ಆಕೆಗೆ ಏನನ್ನೂ ನೀಡಿಲ್ಲ. ಎಲ್ಲಾ ಆಸ್ತಿಯನ್ನು ತನ್ನ ಕುಟುಂಬ ಸದಸ್ಯರು ಮತ್ತು ಸಹೋದರರಿಗೆ ನೀಡುವುದಾಗಿ ಹೇಳಿದ್ದಾನೆ ಎಂದು ಆಶಾ ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next