Advertisement

ಸಯಾಮಿ ಅವಳಿಗೆ ಜನ್ಮ ನೀಡಿದ ಓಡಿಶಾ ಮಹಿಳೆ

05:57 PM Apr 11, 2021 | Team Udayavani |

ಕೇಂದ್ರಪಾಡ: ಒಡಿಶಾದ ಮಹಿಳೆಯೋರ್ವಳು ಸಯಾಮಿ ಅವಳಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಹೆಣ್ಣು ಮಕ್ಕಳಿಗೆ ಎರಡು ತಲೆ, ಮೂರು ಕೈಗಳು ಇವೆ.

Advertisement

ಭಾನುವಾರ ಒಡಿಶಾದ ಕೇಂದ್ರಪಾಡ ಜಿಲ್ಲಾಸ್ಪತ್ರೆಯಲ್ಲಿ ಕಾಣಿ ಗ್ರಾಮದ ಉಮಕಾಂತ್ – ಅಂಬಿಕಾ ದಂಪತಿಗೆ ಈ ಹೆಣ್ಣು ಮಕ್ಕಳು ಜನಿಸಿವೆ. ಈ ಮಕ್ಕಳಿಗೆ ನಾಲ್ಕು ಕಣ್ಣುಗಳು ಮತ್ತು ನಾಲ್ಕು ಕಿವಿಗಳಿರುವ ಹಾಗೂ ಒಂದು ಮಗುವಿನ ಬೆನ್ನಿನಲ್ಲಿ ಒಂದು ಕೈ ಇದೆ. ವೈದ್ಯರು ಈ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್​ ಶಿಶು ಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಸಯಾಮಿ ಅವಳಿ ಮಕ್ಕಳು ಜನಿಸುವುದು ಅಪರೂಪ. ಈ ಥರದ ಮಕ್ಕಳು ತಾಯಿ ಗರ್ಭದಿಂದಲೇ ಶರೀರದ ಭಾಗಗಳನ್ನು ಪರಸ್ಪರ ಜೋಡಿಸಿಕೊಂಡು ಹುಟ್ಟುತ್ತವೆ. ಈ ಮಕ್ಕಳ ದೇಹ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇಂತಹ ಮಕ್ಕಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಬಹುದು. ಈ ಹಿಂದೆ ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಅವಳಿಗಳನ್ನು ಬೇರ್ಪಡಿಸಿರುವ ಉದಾಹರಣೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next