ನವದೆಹಲಿ: ಇತ್ತೀಚಿಗೆ ವಿಮಾನ ಪ್ರಯಾಣದ ವೇಳೆ ಪ್ರಯಾಣಿಕನೋರ್ವ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ, ವಿಮಾನದೊಳಗೆ ಪ್ರಯಾಣಿಕನಿಂದ ಸಿಗರೇಟು ಸೇವನೆಯಿಂದ ಸುದ್ದಿಯಾಗಿದ್ದ ಏರ್ ಇಂಡಿಯಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ಏರ್ ಇಂಡಿಯಾ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲುಗಳು ಪತ್ತೆಯಾಗಿದ್ದು ಈ ಕುರಿತು ಸರ್ವಪ್ರಿಯಾ ಸಾಂಗ್ವಾನ್ ಎಂಬ ಮಹಿಳೆ ಟ್ವಿಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಆಹಾರದಲ್ಲಿ ಸಿಕ್ಕಿರುವ ಕಲ್ಲಿನ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ ಸರ್ವಪ್ರಿಯಾ ಸಾಂಗ್ವಾನ್ ಅವರು ಏರ್ ಇಂಡಿಯಾವನ್ನು ಟ್ಯಾಗ್ ಮಾಡಿ ”ಕಲ್ಲು ಮುಕ್ತ ಆಹಾರವನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಂಪನ್ಮೂಲ ಮತ್ತು ಹಣದ ಅಗತ್ಯವಿಲ್ಲ ಇದು ವಿಮಾನ ಸಂಖ್ಯೆ AI 215 ಆದ ಪ್ರಮಾದ ಈ ರೀತಿಯ ನಿರ್ಲಕ್ಷ ತರವಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಆಹಾರದಲ್ಲಿ ಕಲ್ಲು ಸಿಕ್ಕಿರುವ ಕುರಿತು ವಿಮಾನದ ಸಿಬಂದಿಗೂ ಮಾಹಿತಿ ನೀಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.
ಮಹಿಳೆ ಮಾಡಿರುವ ಟ್ವೀಟ್ ಗೆ ಹೆಚ್ಚಿನವರು ಪ್ರತಿಕ್ರಿಯಿಸಿದ್ದು ಏರ್ ಇಂಡಿಯಾ ಸೇವೆಯ ಕುರಿತು ಕಿಡಿಕಾರಿದ್ದಾರೆ.
ಡಿ.6ರಂದು ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಗರೇಟ್ ಸೇದಿದ್ದಾನೆ. ಮತ್ತೂಂದು ಪ್ರಕರಣದಲ್ಲಿ ಸಹ ಮಹಿಳಾ ಪ್ರಯಾಣಿಕರ ಆಸನವನ್ನ ಆಕ್ರಮಿಸಿಕೊಂಡ ವ್ಯಕ್ತಿ, ಆಕೆಯ ಬ್ಲ್ಯಾಂಕೇಟ್ ಕಸಿದು, ಸ್ಥಳಾವಕಾಶ ಮಾಡಿಕೊಡದೇ ದಾಂದಲೆ ನಡೆಸಿದ್ದಾನೆ.
ಇದನ್ನೂ ಓದಿ: ಜೋಶಿಮಠದಲ್ಲಿ 678 ಕಟ್ಟಡಗಳು ಅಸುರಕ್ಷಿತ: ಹಲವರ ಸ್ಥಳಾಂತರ, ಕಟ್ಟಡ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ