ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನದ ಸುಳ್ಳು ಆರೋಪ ಮಾಡಿದರು ಎಂದು ಆರೋಪಿಸಿ ಮಹಿಳೆಯೊಬ್ಬರು ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಆರ್.ಪುರ ನಿವಾಸಿ ಉಮಾ (40) ಮೃತ ಮಹಿಳೆ. ಇವರು ಕಳೆದ ಮೂರು ತಿಂಗಳಿಂದ ಭಟ್ಟರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್ ಬೈಲೂರ್ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ರೋಹಿತ್ ಮನೆಯಲ್ಲಿ12 ಲಕ್ಷ ರು. ಮೌಲ್ಯದ ಒಡವೆ ಕಳವಾಗಿದ್ದರಿಂದ ರೋಹಿತ್, ಮನೆ ಕೆಲಸದಾಕೆ ಉಮಾ ಮತ್ತು ಅಂಜಿನಮ್ಮ ಎಂಬುವರ ಮೇಲೆ ಅನುಮಾನಗೊಂಡು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಫೆ.10ರಂದು ಎಫ್‌ಐಆರ್ ದಾಖಲಿಸಿ ಮನೆ ಕೆಲಸ ಮಾಡುವವರನ್ನು ಕರೆದು ವಿಚಾರಣೆ ಮಾಡಿದ್ದರು.
ಇದರಿಂದ ಮಾನಸಿಕವಾಗಿ ನೊಂದಿದ್ದ ಉಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ಬಳಿಕವೂ ಪೊಲೀಸರು ಗುರುವಾರ ಮತ್ತೊಮ್ಮೆ ಠಾಣೆಗೆ ಕರೆಸಿ ಉಮಾ ಅರನನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದರು. ಇದರಿಂದ ಉಮಾ ಮತ್ತಷ್ಟು ಬೇಸರಗೊಂಡಿದ್ದರು.
ಇದನ್ನೂ ಓದಿ:ರಾಜಸ್ಥಾನಕ್ಕೂ ವ್ಯಾಪಿಸಿದ ವಿವಾದ:ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ತಡೆದ ಕಾಲೇಜು
ಮನೆ ಮಾಲೀಕ ರೋಹಿತ್ ಮತ್ತು ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ ಮಾಡಿದರೂ ಎಂದು ಶುಕ್ರವಾರ ವಿಡಿಯೊ ಮಾಡಿ ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.