Advertisement

ಗರ್ಭಿಣಿ ಹೊಟ್ಟೆ ಮೇಲೆ ‘ಹುಳ’ ಬಿಟ್ಟರು ; ಯಾವ ಹುಳ ಗೊತ್ತಾ? ಇದನ್ನು ಓದಿ

09:28 PM Jul 05, 2020 | Sriram |

ವಾಷಿಂಗ್ಟನ್‌: ಈಗ ಫೋಟೋ ಶೂಟ್‌ ಎನ್ನುವುದು ಉಳ್ಳವರ ಜೀವನದ ಭಾಗವಾಗಿ ಹೋಗಿದೆ. ನಾಮಕರಣ, ನಿಶ್ಚಿತಾರ್ಥ, ಮದುವೆ… ಹೀಗೆ ಹಲವಾರು ಸಂದರ್ಭಗಳಲ್ಲಿ ಫೋಟೋಶೂಟ್‌ ನಡೆಸಲಾಗುತ್ತಿದೆ. ಇದೇ ರೀತಿ, ಪ್ರಸವಕ್ಕೂ ಮುನ್ನ ಫೋಟೋ ಶೂಟ್‌ ಮಾಡಿಸಿಕೊಳ್ಳುವುದು ಗರ್ಭಿಣಿಯರ ಒಂದು ಕಾಮನ್‌ ಆಕಾಂಕ್ಷೆಯಾಗಿ ಮಾರ್ಪಟ್ಟಿದೆ.

Advertisement

ಇದೇ ಖಯಾಲಿಯಲ್ಲೇ ಅಮೆರಿಕದ ಬೆಥಾನಿ ಕುರುಲಾಕ್‌ ಹಾಗೂ ಬೆಕರ್‌ ಎಂಬ ದಂಪತಿಯ ಹೆರಿಗೆ ಮುನ್ನ ಫೋಟೋ ಶೂಟ್‌, ನೆಟ್ಟಿಗರನ್ನು ಗಾಬರಿಗೊಳಿಸಿದೆ.

ತಮ್ಮ ಹೊಟ್ಟೆಯ ಮೇಲೆ ಅಂದಾಜು 10,000 ಜೇನು ಹುಳಗಳನ್ನು ಕೂರಿಸಿಕೊಂಡು ಬೆಥಾನಿಯವರು ಫೋಟೋ ತೆಗೆಸಿಕೊಂಡಿದ್ದಾರೆ.

ಅಸಲಿಗೆ, ಬೆಥಾನಿಯವರು ಜೇನು ಸಾಕಣೆದಾರರು. ಹಾಗಾಗಿ, ಈ ಫೋಟೋ ಶೂಟ್‌ನಲ್ಲಿ ತಮ್ಮ ಜೇನುಹುಳಗಳಿಗೂ ಸ್ಥಾನ ಕಲ್ಪಿಸಿದ್ದಾರೆ. ಆದರೆ, ಇದು ನೆಟ್ಟಿಗರಿಗೆ ಸರಿ ಎನ್ನಿಸಿಲ್ಲ. ಜೇನುಹುಳಗಳನ್ನು ಹೊಟ್ಟೆಯ ಮೇಲೆ ಕೂರಿಸಿಕೊಳ್ಳುವುದರಿಂದ ಹೊಟ್ಟೆಯೊಳಗಿನ ಮಗುವಿಗೆ ಅಲರ್ಜಿ ಆಗಬಹುದು. ಗರ್ಭಿಣಿಗೂ ತೊಂದರೆಯಾಗಬಹುದು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಬೆಥಾನಿ, ವೈದ್ಯರ ಅನುಮತಿ ಪಡೆದೇ ಈ ಫೋಟೋ ತೆಗೆಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next