ವಿಜಯಪುರ: ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಹಾಗೂ ಬಲತ್ಕಾರಕ್ಕೆ ಯತ್ನಿಸಿದ ಕೃತ್ಯ ವಕೀಲನನ್ನು ಗಡೀಪಾರು ಮಾಡುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ ಮಾತನಾಡಿ, ವಿಜಯಪುರ ನಗರದ ಖಾದ್ರಿ ಎನ್ನುವ ವಕೀಲ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ವೆಸಗಲು ಪ್ರಯತ್ನಿಸಿದ್ದಾನೆ. ಅಲ್ಲದೇ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲೂ ಪ್ರಯತ್ನಿಸಿದ್ದಾನೆ. ಕಾರಣ ಕೂಡಲೇ ಆರೋಪಿಯನ್ನು ಬಂಧಿಸಬೇಕು. ವಕೀಲ ವೃತಿಯ ರದ್ದುಗೊಳಿಸಿ ನ್ಯಾಯವಾದಿಗಳ ಪಟ್ಟಿಯಿಂದ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘಟನೆಯ ಪ್ರಮುಖರಾದ ಅಡಿವೆಪ್ಪ ಸಾಲಗಲ್ಲ, ಸಂಜು ಕಂಬಾಗಿ, ಸಿದ್ದು ರಾಯಣ್ಣವರ, ದಾದಾಸಾಹೇಬ ಬಾಗಾಯತ, ಸಚಿನ ಸವನಳ್ಳಿ, ನಾಗು ಗುಡಿಮನಿ, ಸುನಂದಾ ದೊಡಮನಿ, ಪುನೀತ ಕಾಂಬಳೆ, ಸಂಜು ತೊರವಿ, ರಾಜಶೇಖರ ಕುದರಿ, ಯಮನಪ್ಪ ಸಿದರಡ್ಡಿ, ಸುರೇಶ ಬಬಲೇಶ್ವರ ಶಶಿಧರ ಅಥರ್ಗಾ, ಸಿದ್ದಾಥ ಪರನಾರಕರ, ಮಲ್ಲು ಹಾದಿಮನಿ, ಮಡಿವಾಳ ಯಾಳವಾರ, ಮಲ್ಲು ಜಾಲಗೇರಿ, ಸೋಮು ರಣದೇವಿ, ವಿಶ್ವಾಸ ಕಾಂಬಳೆ, ರವಿ ಗಿರಸಂಗಿ, ತಮ್ಮಣ್ಣ ಗಾಂಜೇನವರ ಸೇರಿದಂತೆ ಇತರರು ಇದ್ದರು.