ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ಮಹಿಳೆಯನ್ನು ವಿವಸ್ತ್ರಗೊಳಿಸಿ ಗ್ರಾಮದ ಬೀದಿಯಲ್ಲಿ ಹಾಡಹಗಲೇ ಎಳೆದಾಡಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಗ್ರಾಮೀಣ ಪೊಲೀಸರು ಬುಧವಾರ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಸುಗುರಾ ಮುಂಡೊಡಗಿ, ಸಿಕಂದರ್ ಇಸ್ಮಾಯಿಲ್ ಅಗರಖೇಡ, ಶಬಾನಾ ಅಗರಖೇಡ, ಶಬ್ಬೀರ್ ಅಗರಖೇಡ, ಫರೀದಾ ಅಗರಖೇಡ ಹಾಗೂ ಘಟನೆಯ ವಿಡಿಯೋ ಮಾಡಿದ ಸುಭಾಷ್ ಕ್ಷತ್ರಿ ಬಂಧಿತರು.
ಪ್ರಕರಣ ಕುರಿತು ತೀವ್ರ ತನಿಖೆ ಕೈಗೊಂಡಿದ್ದು, ಇನ್ನುಳಿದ ಆರೋಪಿಗಳಾದ ಇಸ್ಮಾಯಿಲ್ ಅಗರಖೇಡ, ಶರೀಫಾ
ಅಗರಖೇಡ, ಇಸ್ಪಾಕ್ ಅಗರಖೇಡ, ರಾಜು ಅಗರಖೇಡ ಅವರ ಶೋಧ ಕಾರ್ಯ ನಡೆದಿದೆ.
ಸಂತ್ರಸ್ತೆಗೆ ಪಾಟೀಲ ಸಾಂತ್ವನ: ಬುಧವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರಲ್ಲದೆ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ನಿರ್ದೇಶನ ನೀಡಿದರು. ಬಳಿಕ ಘಟನೆ ಕುರಿತು ಮಾಹಿತಿ ಪಡೆದು ಮಾತನಾಡಿದ ಅವರು,
ಆರೋಪಿಗಳನ್ನು ಬಂಧಿ ಸಿ ಕಠಿಣ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಅಲ್ಲದೇ ಇಂಡಿ ಠಾಣೆ ಪೊಲೀಸ್ ಅ ಧಿಕಾರಿಗಳು ಬಾಧಿ ತ ಮಹಿಳೆಯ ದೂರು ದಾಖಲಿಸಿಕೊಳ್ಳದೆ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿ ಕಾರಿಯನ್ನು ಬದಲಿಸುವಂತೆ ಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದರು.