ಬೀಜಿಂಗ್: ಇತ್ತೀಚೆಗೆ ಬೆನ್ನು ನೋವು ಹಾಗೂ ಜ್ವರ ಎಂದು ಆಸ್ಪತ್ರೆಗೆ ಹೋಗಿದ್ದ 56 ವರ್ಷದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರೇ ಶಾಕ್ ಗೆ ಒಳಗಾಗಿದ್ದರು. ಅದಕ್ಕೆ ಕಾರಣ ಆಕೆಯನ್ನು ಪರೀಕ್ಷಿಸಿದಾಗ ಬಲ ಕಿಡ್ನಿಯಲ್ಲಿ ಪೂರ್ಣ ಕಲ್ಲುಗಳು ತುಂಬಿಕೊಂಡಿರುವುದು. ಬರೋಬ್ಬರಿ 3ಸಾವಿರ ಸಣ್ಣ,ಸಣ್ಣ ಕಲ್ಲುಗಳಿದ್ದಿತ್ತು!
ಇದು ಚೀನಾದ ಜಿಯಾಂಗ್ ಸು ಪ್ರಾಂತ್ಯದ ವೊಜಿನ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಮಾಧ್ಯಮದ ವರದಿ ಪ್ರಕಾರ, ಮಹಿಳೆಯನ್ನು ಝಾಂಗ್ ಎಂದಷ್ಟೇ ಗುರುತಿಸಲಾಗಿದೆ ಎಂದು ತಿಳಿಸಿದೆ.
ಕಳೆದ ವಾರ ಬೆನ್ನು ನೋವು ಎಂದು ಮಹಿಳೆ ಆಸ್ಪತ್ರೆಗೆ ಬಂದಿದ್ದು, ಆಕೆಯನ್ನು ಪರೀಕ್ಷೆಗೊಳಪಡಿಸಿದಾಗ ಬಲಭಾಗದ ಕಿಡ್ನಿಯಲ್ಲಿ ಪೂರ್ಣ ಕಿಡ್ನಿಕಲ್ಲುಗಳೇ ತುಂಬಿಕೊಂಡಿರುವುದು ಪತ್ತೆಯಾಗಿತ್ತು ಎಂದು ಹೇಳಿದೆ.
ಮಾಡರ್ನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ವೈದ್ಯರು ಸುಮಾರು ಒಂದು ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆಯ ನಡೆಸಿ ಕಿಡ್ನಿ ಸ್ಟೋನ್ ಅನ್ನು ತೆಗೆದಿದ್ದರು. ಬಳಿಕ ಕಿರಿಯ ವೈದ್ಯರೊಬ್ಬರು ಲೆಕ್ಕ ಹಾಕಿದಾಗ ಬರೋಬ್ಬರಿ 2,980 ಕಿಡ್ನಿ ಸ್ಟೋನ್ ಗಳಿದ್ದವು ಎಂದು ವರದಿ ವಿವರಿಸಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಮಹಾರಾಷ್ಟ್ರದ ದುಲೆಯ ಧನ್ ರಾಜ್ ವಾಡ್ಲೈ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರ ಕಿಡ್ನಿಯಿಂದ ಬರೋಬ್ಬರಿ 1,72,155 ಕಿಡ್ನಿ ಸ್ಟೋನ್ ತೆಗೆದಿರುವುದು ದಾಖಲೆಯಾಗಿದೆ.