ಇಲ್ಲಿನ ನಿವಾಸಿ ಹರಿಪ್ರಸಾದ್ ಅವರ ಪತ್ನಿ ಜಯಲಕ್ಷ್ಮಿ ದೇವಾಡಿಗ(35)ಅವರು ಆತ್ಮಹತ್ಯೆ ಗೈದವರಾಗಿದ್ದಾರೆ.
Advertisement
ಹರಿಪ್ರಸಾದ್ ಅವರು ಜಯಲಕ್ಷ್ಮಿ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಜಯಲಕ್ಷ್ಮಿ ಅವರು ಮೊಬೈಲ್‌ನಲ್ಲಿ ಜಾಸ್ತಿ ಹೊತ್ತು ಯಾರಲ್ಲಿಯೋ ಮಾತನಾಡುವುದು, ಮೆಸೇಜ್ ಮಾಡುವುದನ್ನು ಗಮನಿಸಿ ಹರಿಪ್ರಸಾದ್ ಅವರು ಬುದ್ದಿವಾದ ಹೇಳಿದ್ದು ಆ ಬಳಿಕ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ತನ್ನ ತಪ್ಪಿನ ಅರಿವಾಗಿ ಬಳಿಕ ಖನ್ನತೆಯಲ್ಲಿರುವುದನ್ನು ಗಮನಿಸಿ ಹರಿಪ್ರಸಾದ್ ಸಮಾಧಾನ ಮಾಡಿ ಬಳಿಕ ಜಯಲಕ್ಷ್ಮಿ ಅವರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಅವರು ಕೂಡಾ ಆಕೆಗೆ ಸಮಾದಾನ ಹೇಳಿದ್ದರು. ಆದರೆ ಬುಧವಾರ ಸಂಜೆ ತನ್ನ ಗಂಡ ಪೇಟೆಗೆ ಹೋಗಿರುವುದನ್ನು ಗಮನಿಸಿ ತನ್ನ ಮನೆಯ ಕೊಟ್ಟಿಗೆಯಲ್ಲಿರುವ ಕೊಠಡಿಯೊಳಗೆ ಕೊಠಡಿಯ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ದಯಾನಂದ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.