Advertisement

Loan ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಮಹಿಳೆಯಿಂದ ಮಾರಕಾಸ್ತ್ರದಿಂದ ದಾಳಿ: ವ್ಯಕ್ತಿ ಸಾವು

10:13 PM Jan 13, 2024 | Team Udayavani |

ಚಿಕ್ಕಮಗಳೂರು: ನೀಡಿದ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬರು ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲಾಗಿದೆ.

Advertisement

ಜಿಲ್ಲೆಯ ತರೀಕೆರೆ ತಾಲೂಕು ಕರಕುಚ್ಚಿ ಗ್ರಾಮದ ಕೆ.ಜಿ. ನವೀನ್ ಮೃತ ವ್ಯಕ್ತಿಯಾಗಿದ್ದು ಈತನನ್ನು ಶಿವಮೊಗ್ಗ ದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗ ಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾನೆ. ಪ್ರಕರಣ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಕುಚ್ಚಿ ತಾಂಡ್ಯ ಗ್ರಾಮದ ಜ್ಯೋತಿ ಬಾಯಿ ಮತ್ತು ನಾಗ್ಯನಾಯ್ಕ್ ಎಂಬುವರನ್ನು ಬಂಧಿ ಸಲಾಗಿದೆ.

ಘಟನೆ ವಿವರ
ಕರಕುಚ್ಚಿ ಗ್ರಾಮದ ಕೆ.ಜಿ.ನವೀನ್ ಮತ್ತು ಜ್ಯೋತಿಬಾಯಿ ದೂರದ ಸಂಬಂಧಿಕರಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಜ್ಯೋತಿಬಾಯಿ ತಮ್ಮ ಸಂಬಂಧಿ ಕೆ.ಜಿ.ನವೀನ್ ಹತ್ತಿರ ಮನೆ ಕಟ್ಟಲು 5ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಪಡೆದ ಸಾಲವನ್ನು ಸಕಾಲದಲ್ಲಿ ನೀಡದಿದ್ದರಿಂದ ಕೆ.ಜಿ.ನವೀನ್ ಪದೇ ಪದೇ ಜ್ಯೋತಿಬಾಯಿ ಅವರ ಮನೆಗೆ ಹೋಗಿ ಬರುತ್ತಿದ್ದ ಎನ್ನಲಾಗುತ್ತಿದೆ.

ಗ್ರಾಮದಲ್ಲಿ ಇವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರಿಂದ ಅವರ ಮನೆಗೆ ಹೋಗುವುದನ್ನು ಕೆ.ಜಿ.ನವೀನ್ ನಿಲ್ಲಿಸಿದ್ದು, ಅವರು ಮತ್ತು ನಮ್ಮ ಕುಟುಂಬ ಅನ್ಯೋನ್ಯವಾಗಿರಲಿಲ್ಲ. ಜ್ಯೋತಿಬಾಯಿ ಕುಟುಂಬ ದವರು ನಮ್ಮ ನಮ್ಮ ಮೇಲೆ ವೈಷ್ಯಮ್ಯ ಬೆಳೆಸಿಕೊಂಡಿದ್ದರು ಎಂದು ಮೃತ ಕೆ.ಜಿ.ನವೀನ್ ಪತ್ನಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಜ.2ರಂದು ಗ್ರಾಮದ ನಾಗ್ಯನಾಯ್ಕ ಎಂಬುವರು ಜ್ಯೋತಿಬಾಯಿ ಸಾಲದ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆಂದು ಕೆ.ಜಿ. ನವೀನ್‌ನನ್ನು ಕರೆದುಕೊಂಡು ಜ್ಯೋತಿಬಾಯಿ ಮನೆಗೆ ಬಿಟ್ಟಿದ್ದು, ಕೆ.ಜಿ.ನವೀನ್ ಜ್ಯೋತಿಬಾಯಿ ಅವರ ಮನೆಗೆ ಹೋಗಿದ್ದ ವೇಳೆ ಜ್ಯೋತಿಬಾಯಿ ಹಿಂಬದಿಯಿಂದ ಕತ್ತಿಯಿಂದ ಕೆ.ಜಿ.ನವೀನ್ ಮೇಲೆ ಹಲ್ಲೆ ನಡೆಸಿದ್ದಾಳೆ.

Advertisement

ಗ್ರಾಮದಲ್ಲಿ ನಮ್ಮಿಬ್ಬರ ಬಗ್ಗೆ ಅಪಪ್ರಚಾರ ಮಾಡುತ್ತಿರು ವುದಾಗಿ ಆರೋಪಿಸಿ‌ದ ಜ್ಯೋತಿಬಾಯಿ, ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಮತ್ತೊಮ್ಮೆ ಕತ್ತಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿ ದ್ದಾಳೆ. ಈ ವೇಳೆ ನವೀನ್ ಮನೆಯಿಂದ ಹೊರ ಓಡಿಬಂದಿ ದ್ದು, ಗ್ರಾಮದವರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾ ಗಿದ್ದು, ನಂತರ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಕೆ.ಜಿ.ನವೀನ್ ಶುಕ್ರವಾರ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಾಲಕೊಟ್ಟ ಕೆ.ಜಿ.ನವೀನ್ ಇಹಲೋಲ ತ್ಯಜಿಸಿದ್ದಾನೆ. ಹಲ್ಲೆ ಮಾಡಿದ ಮಹಿಳೆ ಜೈಲು ಪಾಲಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next