Advertisement

ವನಿತಾ ಹಾಕಿ ತಂಡಕ್ಕೆ ವೈದ್ಯಾಧಿಕಾರಿ ನೇಮಕ

01:15 AM Jan 31, 2019 | Team Udayavani |

ಬೆಂಗಳೂರು: ಈ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಕೂಟವನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಹಾಕಿ ಫೆಡರೇಶನ್‌, ಭಾರತ ವನಿತಾ ಹಾಕಿ ತಂಡಕ್ಕೆ ಇದೇ ಮೊದಲ ಬಾರಿಗೆ ವೈದ್ಯಾಧಿಕಾರಿಯನ್ನು ನೇಮಕ ಮಾಡಿದೆ.

Advertisement

ಭಾರತದ ವನಿತಾ ಹಾಕಿ ತಂಡ, ಮೀಸಲು ಆಟಗಾರರನ್ನು ಒಳಗೊಂಡಂತೆ ಎಲ್ಲ ಸದಸ್ಯರು ಸರಾಸರಿ 300 ದಿನಗಳನ್ನು ವಿದೇಶಗಳಲ್ಲಿ ಕಳೆಯುತ್ತಾರೆ. ಹೀಗಾಗಿ ಅವರಿಗೆ ಮಾನಸಿಕ ಸೆœ„ರ್ಯ ಹಾಗೂ ಒತ್ತಡವನ್ನು ನಿವಾರಿಸಲು ವೈದ್ಯರ ಸಹಾಯ ಬೇಕಾಗುತ್ತದೆ. ಹೀಗಾಗಿ ಹಾಕಿ ಫೆಡರೇಶನ್‌ ವೈದ್ಯಾಧಿಕಾರಿಯ ನೇಮಕಕ್ಕೆ ಮುಂದಾಗಿದೆ.

ಸದ್ಯ 4 ಪಂದ್ಯಗಳ ಸರಣಿಗಾಗಿ ಸ್ಪೇನ್‌ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರ ಆರೋಗ್ಯದ ಬಗ್ಗೆ ಗಮನಹರಿಸಲು ಹಾಕಿ ಫೆಡರೇಶನ್‌ ಪ್ರಿಯಾಂಕಾ ಎಂಬವರನ್ನು ವೈದ್ಯಾಧಿಕಾರಿಯಾಗಿ ಕಳುಹಿಸಿದೆ.

ವೈದ್ಯಾಧಿಕಾರಿಯನ್ನು ನೇಮಕ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ನಾಯಕಿ ರಾಣಿ ರಾಮ್‌ಪಾಲ್‌, “ಅವರು ನಮ್ಮ ಬಲದ ಬಗ್ಗೆ ಅವರ ಗಮನಹರಿಸುತ್ತಾರೆ. ಮೋಜಿನ ಆಟಗಳನ್ನು ಆಡಿಸಿ ಒತ್ತಡಗಳನ್ನು ಕಡಿಮೆಗೊಳಿಸಿ ತಂಡದಲ್ಲಿ ಬಾಂಧವ್ಯ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next