Advertisement

4 ದಿನ ಒತ್ತೆಸೆರೆ: ವಿವಾಹಿತೆಯ ಮೇಲೆ 40 ಮಂದಿಯಿಂದ ರೇಪ್‌

07:27 PM Jul 20, 2018 | Team Udayavani |

ಚಂಡೀಗಢ : “ಹರಿಯಾಣದ ಪಂಚಕುಲ ಜಿಲ್ಲೆಯ ಮೋರ್ನಿ ಪ್ರದೇಶದಲ್ಲಿನ ಗೆಸ್ಟ್‌ ಹೌಸ್‌ನಲ್ಲಿ ನನ್ನನ್ನು  ಬಂಧಿಯಾಗಿರಿಸಿ ಸುಮಾರು 40 ಜನರು ನಿರಂತರ ನಾಲ್ಕು ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು 22ರ ಹರೆಯದ ಚಂಡೀಗಢದ ವಿವಾಹಿತ ಮಹಿಳೆಯೋರ್ವಳು ನೀಡಿರುವ ದೂರನ್ನು ಅನುಸರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Advertisement

ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆಯ ಪತಿಯು, “ನನ್ನ ಪತ್ನಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಆಕೆಯನ್ನು ನಮಗೆ ತಿಳಿದಿರುವ ಓರ್ವ ವ್ಯಕ್ತಿ ಗೆಸ್ಟ್‌ ಹೌಸ್‌ಗೆ ಕರೆದೊಯ್ದಿದ್ದರು. ಅಲ್ಲಿ ಆಕೆಗೆ ಮಾದಕ ವಸ್ತುವನ್ನು ಉಣಿಸಲಾಯಿತು. ನಾಲ್ಕು ದಿನಗಳ ಕಾಲ ಆಕೆಯನ್ನು ಅಲ್ಲಿ ಒತ್ತೆಸೆರೆಯಲ್ಲಿ ಇರಿಸಿಕೊಳ್ಳಲಾಗಿತ್ತು ಮತ್ತು ಆರೋಪಿಗಳು ಆಕೆಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ನಡೆಸಿದರು. ನನಗೆ ಮತ್ತು ನನ್ನ ಪತ್ನಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು’ ಎಂದು ಹೇಳಿದರು. 

ಮಣಿಮಾಜ್ರಾ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡ ಚಂಡೀಗಢ ಪೊಲೀಸರು ಅನಂತರ ಕೇಸನ್ನು ಪಂಚಕುಲ ಪೊಲೀಸರಿಗೆ ಹಸ್ತಾಂತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next