Advertisement

ವಸತಿ ಕಟ್ಟಡದಿಂದ ಹಾರಿ ಐಟಿ ಇನ್ಸ್‌ಪೆಕ್ಟರ್‌ ಪತ್ನಿ,ಪುತ್ರ ಆತ್ಮಹತ್ಯೆ

07:44 PM Apr 23, 2018 | Team Udayavani |

ಸೂರತ್‌ : ಆದಾಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ ರಾಮ್‌ ಮಹೇಶ್‌ ನೈನ್‌ ಅವರ ಪತ್ನಿ 29ರ ಹರೆಯದ ಚಂಚಲ್‌ ನೈನ್‌ ಇಂದು ತಮ್ಮ ವಸತಿ ಕಟ್ಟಡದ 12ನೇ ಮಾಳಿಗೆಯಿಂದ ಮೂರು ವರ್ಷ ಪ್ರಾಯದ ಮಗನನ್ನು ಕೆಳಕ್ಕೆಸೆದು ಬಳಿಕ ತಾನೂ ಕೆಳ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರು ತಿಳಿಸಿರುವ ಪ್ರಕಾರ ಚಂಚಲ್‌ ನೈನ್‌ ಮೊದಲು ತನ್ನ ಮಗನನ್ನು 12ನೇ ಮಾಳಿಗೆಯಿಂದ ಕೆಳಕ್ಕೆಸೆಳೆದಳು; ಬಳಿಕ ತಾನೂ ಹಾರಿದಳು; ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು; ಆದರೆ ಕಾರಣವೇನು ಎಂಬುದು ಗೊತ್ತಾಗಿಲ್ಲ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next