Advertisement
ಆಟೋದಿಂದ ಹೊರಗೆಸೆದಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು ಎಂದು ವರದಿ ಹೇಳಿದೆ.
ತನ್ನ ಗಂಡನ ಜೊತೆ ರಂಪಾಟ ಮಾಡಿಕೊಂಡಿದ್ದ 29 ವರ್ಷದ ಸಂತ್ರಸ್ತೆ ಮೇ 29ರಂದು ಮಧ್ಯರಾತ್ರಿ ಪೋಷಕರ ಮನೆಯತ್ತ ಹೊರಟಿದ್ದಳು. ಅದಕ್ಕಾಗಿ ಆಕೆ ಆಟೋ ಹತ್ತಿದ್ದಳು. ಆಟೋದಲ್ಲಿ ಮೊದಲೇ ಮೂವರು ಗಂಡಸರು ಇದ್ದಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಆಟೋದಲ್ಲಿ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ಮೂವರು ಪ್ಯಾಸೆಂಜರ್ ಆಕೆಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದರು. ಏತನ್ಮಧ್ಯೆ 9 ತಿಂಗಳ ಮಗು ಅಳಲು ಆರಂಭಿಸಿತ್ತು. ಇದರಿಂದ ಸಿಟ್ಟಿಗೆದ್ದ ಕೀಚಕ ಕಾಮುಕರು ಮಗುವನ್ನು ಆಟೋದಿಂದ ಹೊರಗೆಸೆದಿದ್ದರು. ಬಳಿಕ ದೆಹಲಿ ಗುರ್ಗಾಂವ್ ನಿರ್ಜನ ರಸ್ತೆಯಲ್ಲಿ ಆಕೆಯ ಮೇಲೆ ಸಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
Related Articles
Advertisement