Advertisement

ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ ಪಾಕ್‌ ಹೈಕಮಿಶನ್‌ ಸಿಬಂದಿ

01:49 PM Jan 14, 2019 | udayavani editorial |

ಹೊಸದಿಲ್ಲಿ : ಇಲ್ಲಿನ ಪಾಕ್‌ ಹೈಕಮಿಶನ್‌  ಕಾರ್ಯಾಲಯದ ಸಿಬಂದಿಯೋರ್ವ ತನ್ನನ್ನು ಮಾರುಕಟ್ಟೆ ಪ್ರದೇಶದಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಎಂದು ಮಹಿಳೆಯೋರ್ವರು ನೀಡಿದ ದೂರಿನ ಪ್ರಕಾರ ಸರೋಜಿನಿ ನಗರ ಪೊಲೀಸ್‌ ಠಾಣೆ ಸಿಬಂದಿಗಳು ಆರೋಪಿ ಮತ್ತು ಮಹಿಳೆಯನ್ನು  ಠಾಣೆಗೆ ಕರೆದೊಯ್ದ ಘಟನೆ ಇಂದು ಸೋಮವಾರ ನಡೆದಿದೆ. 

Advertisement

ಮಹಿಳೆಯ ಆರೋಪವನ್ನು ಆರೋಪಿ ಪಾಕ್‌ ಸಿಬಂದಿ ಅಲ್ಲಗಳೆದಿದ್ದಾನೆ.ಸರೋಜಿನಿ ನಗರ ಮಾರ್ಕೆಟ್‌ನಲ್ಲಿ ತುಂಬಾ ರಶ್‌ ಇತ್ತು; ನನ್ನ ಕೈ ಆಕೆಗೆ ತಾಗಿತ್ತು ಅಷ್ಟೇ ಎಂದಾತ ಹೇಳಿದ್ದಾನೆ.  ಆದರೆ ಬಳಿಕ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದ ನೆಲೆಯಲ್ಲಿ ಆತನನ್ನು ಬಿಡಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next