Advertisement

ಹತ್ಯೆ ಕೇಸ್ ಆರೋಪಿಯನ್ನು ಎನ್ ಕೌಂಟರ್ ಮಾಡಿದ ಉತ್ತರಪ್ರದೇಶ ಪೊಲೀಸರು

06:44 PM Feb 27, 2023 | Team Udayavani |

ಪ್ರಯಾಗ್‌ರಾಜ್: ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರನ್ನು ಫೆಬ್ರವರಿ 24 ರಂದು ಗುಂಡಿಕ್ಕಿ ಹತ್ಯೆಗೈದ ಆರೋಪಿಗಳಲ್ಲಿ ಒಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಸೋಮವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

Advertisement

ಪ್ರತ್ಯಕ್ಷದರ್ಶಿ ಉಮೇಶ್ ಪಾಲ್ ಅವರ ಮೇಲೆ ದಾಳಿ ಮಾಡಲು ದಾಳಿಕೋರರು ಬಳಸಿದ ಬಿಳಿ ಬಣ್ಣದ ಎಸ್‌ಯುವಿ ಚಾಲಕ ಅರ್ಬಾಜ್‌ನನ್ನು ಗುಪ್ತಚರ ಮಾಹಿತಿಯ ನಂತರ ಪೊಲೀಸ್ ತಂಡಗಳು ಧೂಮಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರೂ ಪಾರ್ಕ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುತ್ತುವರೆದಿದ್ದಾರೆ.  ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಅರ್ಬಾಜ್‌ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದು, ಪೊಲೀಸರ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.

”ಅರ್ಬಾಜ್ ಜೊತೆಗೆ ಇಬ್ಬರು ಅಥವಾ ಮೂರು ಜನರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಾವು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ” ಎಂದರು.

ಉಮೇಶ್ ಪಾಲ್ ಮತ್ತು ಅವರ ಪೊಲೀಸ್ ಭದ್ರತಾ ಸಿಬಂದಿ ಸಂದೀಪ್ ನಿಶಾದ್ ಅವರನ್ನು ಶುಕ್ರವಾರ ಪ್ರಯಾಗ್‌ರಾಜ್‌ನ ಧೂಮಂಗಂಜ್ ಪ್ರದೇಶದಲ್ಲಿನ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ದಾಳಿಯಲ್ಲಿ ಗಾಯಗೊಂಡಿದ್ದ ಇನ್ನೋರ್ವ ಭದ್ರತಾ ಸಿಬಂದಿ ರಾಘವೇಂದ್ರ ಸಿಂಗ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ಭಾನುವಾರ ಲಕ್ನೋಗೆ ಕರೆದೊಯ್ಯಲಾಗಿದೆ.

ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ ದೂರಿನ ಆಧಾರದ ಮೇಲೆ, ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಪತ್ನಿ ಶಾಯಿಸ್ತಾ ಪರ್ವೀನ್, ಇಬ್ಬರು ಪುತ್ರರು, ಸಹಾಯಕರಾದ ಗುಡ್ಡು ಮುಸ್ಲಿಂ, ಗುಲಾಮ್ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧ ಧೂಮಂಗಂಜ್ ಪೊಲೀಸ್ ಠಾಣೆಯಲ್ಲಿ (ಪ್ರಯಾಗರಾಜ್‌) ಪ್ರಕರಣ ದಾಖಲಾಗಿದೆ.

Advertisement

ಹತ್ಯೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಪ್ರಶ್ನಿಸಿದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಫಿಯಾಗಳನ್ನು ನಾಶಮಾಡುವುದಾಗಿ ವಿಧಾನಸಭೆಯಲ್ಲಿ ಶಪಥ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next