ಲಕ್ನೋ/ಅಯೋಧ್ಯೆ: ರಾಷ್ಟ್ರಪತಿ ರಾಮನಾಥ ಕೋವಿಂದ್ ಪತ್ನಿ ಸವಿತಾ ಕೋವಿಂದ್ ಸಹಿತ ಅಯೋಧ್ಯೆಯಲ್ಲಿರುವ ತಾತ್ಕಾಲಿಕ ದೇಗುಲ ದಲ್ಲಿರುವ ರಾಮ ವಿಗ್ರಹದ ದರ್ಶನ ಮಾಡಿದ್ದಾರೆ. ಇದರ ಜತೆಗೆ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಕಾಮಗಾರಿ ಸ್ಥಳಕ್ಕೆ ಕೂಡ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು ರಾಮನಿಲ್ಲದೆ ಅಯೋಧ್ಯೆ ಅಯೋಧ್ಯೆಯೇ ಅಲ್ಲ. ರಾಮನು ಎಲ್ಲಿ ಇರುತ್ತಾನೆಯೋ ಅಲ್ಲಿಯೇ ಅಯೋಧ್ಯೆ ಇರುತ್ತದೆ.
ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್|ಭಾರತಕ್ಕೆ ಮೂರನೇ ಪದಕ| ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್
ಭಗವಾನ್ ಶ್ರೀರಾಮ ಈ ನಗರದಲ್ಲಿಯೇ ಶಾಶ್ವತವಾಗಿ ನೆಲೆಸಿರುವುದರಿಂದ ಈ ನಗರಕ್ಕೆ ಅಯೋಧ್ಯೆ ಎಂಬ ಹೆಸರು ಬಂದಿದೆ ಎಂದು ಹೇಳಿದ್ದಾರೆ.
ಇದಕ್ಕಿಂತಲೂ ಮೊದಲು ರಾಮಾಯಣಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದ್ದಾರೆ. ತಾತ್ಕಾಲಿಕ ದೇಗುಲದಲ್ಲಿ ರಾಮ ಲಲ್ಲಾನಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲು, ರಾಮ ಮಂದಿರದ ಸಣ್ಣ ಪ್ರತಿಕೃತಿಯನ್ನು ಅರ್ಚಕರು ರಾಷ್ಟ್ರಪತಿ ಕೋವಿಂದ್ ಅವರಿಗೆ ನೀಡಿ ಗೌರವಿಸಿದರು. ಜತೆಗೆ ಹನುಮಾನ್ ಗಾರ್ಹಿ ದೇಗುಲಕ್ಕೆ ಕೂಡ ರಾಷ್ಟ್ರಪತಿ ಭೇಟಿ ನೀಡಿದರು. ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಇದ್ದರು.