Advertisement

ಕಾಂಗ್ರೆಸ್‌ ನಾಯಕರಿಲ್ಲದ ಪಕ್ಷ: ಬಿಜೆಪಿ ಲೇವಡಿ

05:59 PM Apr 22, 2022 | Team Udayavani |

ದೇವನಹಳ್ಳಿ: ದೇಶದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ನಾಯಕನಿಲ್ಲ. ನಾಯಕನಿಲ್ಲದ ಪಕ್ಷ ಕಾಂಗ್ರೆಸ್‌. ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷನಾಗಲು ಇಷ್ಟಪಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ. ಕಾಂಗ್ರೆಸ್‌ ಪಕ್ಷ ನಶಿಸಿ ಹೋಗುತ್ತಿದೆ. ಕರ್ನಾಟಕದ ಜನರಿಗೂ ಕಾಂಗ್ರೆಸ್‌ ಬಗ್ಗೆ ನಿರಾಶಾಭಾವ ಇದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದರು.

Advertisement

ತಾಲೂಕಿನ ಐವಿಸಿ ರಸ್ತೆಯಲ್ಲಿರುವ ದ ಸ್ಕೂಲ್‌ ಆಪ್‌ ಎನ್ಸಿಯಂಟ್‌ ವಿಸ್ಡಮ್‌ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಸದಾ ಗೊಂದಲದ ಪಕ್ಷ. ಆರ್ಟಿಕಲ್‌ 370, ರಾಮಮಂದಿರ ವಿವಾದ, ಸರ್ಜಿಕಲ್‌ ಸ್ಟ್ರೈಕ್‌ ಸೇರಿ ಎಲ್ಲ ಕಡೆ ದ್ವಂದ್ವ ನಿಲುವುಗಳ ಮೂಲಕ ಗೊಂದಲ ಸೃಷ್ಟಿ ಮಾಡಿಕೊಂಡಿದೆ.ಚುನಾವಣೆ ಸಮಯದಲ್ಲೂ ಸಹ ಗೊಂದಲದಲ್ಲಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ನಾವು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ಮುಂದಿನ ಬಾರಿ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಎಲ್ಲ ಕೇಂದ್ರ ರಾಜ್ಯದ ಯೋಜನೆಗಳು ಹಿಂದುಳಿದ, ಅಲ್ಪಸಂಖ್ಯಾತರು, ಸೇರಿ ಫ‌ಲಾನುಭವಿಗಳಿಗೆ ಸೇರಿದೆ. ನಾವು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ತತ್ವದ ಅಡಿಯಲ್ಲಿ ದೇಶ ಕಟ್ಟುವ ಕೆಲಸ ಮಾಡತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಿಗೆ ತಿರುಗೇಟು: ಶೇ.40% ಕಮಿಷನ್‌ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಲಿಖೀತ ದೂರು ಇಲ್ಲದೇ, ಸಾಕ್ಷಿ ಇಲ್ಲದೇ ಕೇವಲ ವಾಟ್ಸಾಪ್‌ ಸಂದೇಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಆದರೂ, ನೈತಿಕ ಹೊಣೆಗಾರಿಕೆಯಿಂದ ಈಶ್ವರಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಈ ರೀತಿಯ ಪರ್ಸೆಂಟೇಜ್‌ ಭ್ರಷ್ಟಾಚಾರದ ಮೂಲ ಜನಕರೇ ಕಾಂಗ್ರೆಸ್‌ ಮುಖಂಡರು ಎಂದು ತಿರುಗೇಟು ನೀಡಿದರು.

ವಿಭಾಗಾವಾರು ಕಾರ್ಯಕಾರಿಣಿ ಸಭೆ: ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಬಗ್ಗೆ ವಿಭಾಗಾವಾರು ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದ್ದು, ಒಂದೊಂದು ವಿಧಾನಸಭೆಯ ಕ್ಷೇತ್ರದಲ್ಲಿ ಯಾವ ರೀತಿ ಚುನಾವಣೆಯನ್ನು ಗೆಲ್ಲುವ ಬಗ್ಗೆ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮೂರು ತಂಡಗಳಾಗಿ ಪ್ರವಾಸ ಮಾಡಲಾಗುತ್ತಿದೆ ಎಂದರು.

Advertisement

ಹಲವಾರು ಯೋಜನೆ ಅನುಷ್ಠಾನ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ನರೇಂದ್ರ ಮೋದಿ ಸರ್ಕಾರದಲ್ಲಿ ಆರ್ಥಿಕ, ರಕ್ಷಣಾ, ಆರೋಗ್ಯ, ಕೃಷಿ ,ಮಹಿಳಾ ಸಬಲೀಕರಣ, ಹಲವಾರು ಯೋಜನೆ ಅನುಷ್ಠಾನಗೊಂಡಿದೆ. ಕಾಂಗ್ರೆಸ್‌ 397 ಜನ ಠೇವಣಿ ಕಳೆದುಕೊಂಡಿದ್ದು, ದೇಶದಲ್ಲಿ ನಾಯಕತ್ವ ಇಲ್ಲದ ಪಕ್ಷ, ಮುಂದಿನ ವಿಧಾನ ಸಭಾ ಚುನಾವಣೆ ನಂತರ ಹೆಚ್ಚು ಸಂಖ್ಯೆಯಲ್ಲಿ ಗೆದ್ದು ಕಾಂಗ್ರೆಸ್‌ ಮುಳುಗಲಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಡಾ.ಕೆ.ಸುಧಾಕರ್‌, ಎಂಟಿಬಿ ನಾಗರಾಜ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸುನಿಲ್‌, ಎಚ್‌. ಎಂ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್‌, ಸಿ. ಅಶ್ವಥನಾರಾಯಣ್‌, ಕೆ.ನಾಗೇಶ್‌, ಎಸ್‌.ರಮೇಶ್‌ ಕುಮಾರ್‌, ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಓಬ್‌ದೇನಹಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next