Advertisement
ಅಲ್ಲದೆ ಕಳೆದ ಮೂರು ದಿನಗಳಲ್ಲಿ 214 ಸೋಂಕಿತರು ಬಲಿಯಾಗಿದ್ದಾರೆ. ಈ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯ 40 ಸಾವಿರದ ಗಡಿ ದಾಟಿದ್ದು, ರಾಜಧಾನಿ ಬೆಂಗಳೂರು 20 ಸಾವಿರ ಹೊಸ್ತಿಲಲ್ಲಿ ಬಂದು ನಿಂತಿದೆ.
Related Articles
Advertisement
14 ಮಂದಿಗೆ ಸೋಂಕಿನ ಲಕ್ಷಣ ಇಲ್ಲ!ರಾಜ್ಯದಲ್ಲಿ ಸೋಮವಾರ ವರದಿಯಾಗಿರುವ 73 ಮೃತಪಟ್ಟವರಲ್ಲಿ 14 ಮಂದಿಗೆ ಸೋಂಕಿನ ಲಕ್ಷಣವೇ ಇಲ್ಲ. ಇನ್ನು 2,738 ಸೋಂಕಿತರಲ್ಲಿ 1,315 ಮಂದಿ ಬೆಂಗಳೂರಿನವರು. ಈ ಮೂಲಕ ನಗರದ ಪ್ರಕರಣಗಳ ಸಂಖ್ಯೆ 19,702ಕ್ಕೆ ತಲುಪಿದ್ದು, ಈ ಪೈಕಿ 4,325 ಮಂದಿ ಗುಣ ಮುಖರಾಗಿದ್ದು, 321 ಮಂದಿ ಸಾವಿಗೀಡಾಗಿದ್ದಾರೆ. ಕಡಿಮೆ ಪರೀಕ್ಷೆ – ಹೆಚ್ಚು ಸೋಂಕು!
ಸೋಮವಾರ ರಾಜ್ಯದಲ್ಲಿ ಸೋಂಕು ಪರೀಕ್ಷೆಗಳು 17 ಸಾವಿರಕ್ಕೆ ಇಳಿಕೆಯಾಗಿವೆ. ರವಿವಾರದವರೆಗೂ ಸರಾಸರಿ 20 ಸಾವಿರ ಪರೀಕ್ಷೆಗಳಾಗುತ್ತಿದ್ದವು. ಇನ್ನು ಪರೀಕ್ಷೆ ಪ್ರಮಾಣ ಇಳಿಕೆಯಾದರೂ ಸೋಂಕು ಮಾತ್ರ ಇಳಿಕೆಯಾಗಿಲ್ಲ. ಇದರಿಂದ ಪಾಸಿಟಿವ್ ದರ ಶೇ.13 ರಿಂದ 16ಕ್ಕೆ ಹೆಚ್ಚಳವಾಗಿದೆ. ಅಂದರೆ, 100 ಮಂದಿ ಪರೀಕ್ಷೆ ಮಾಡಿದರೆ 16 ಮಂದಿಗೆ ಸೋಂಕು ದೃಢಪಡುತ್ತಿದೆ. ಇನ್ನು ಮಂಗಳವಾರದಿಂದ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳ ವರದಿ ಬರಲಿದ್ದು, ಸೋಂಕು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.