Advertisement
ತಾಲೂಕಿನ ಗಾವಡಗೆರೆ, ಮುಳ್ಳೂರು, ಗುರುಪುರ, ದೊಡ್ಡಹೆಜೂjರು, ಕಟ್ಟೆ ಮಳಲವಾಡಿ, ಹಿರಿಕ್ಯಾತನಹಳ್ಳಿ ಗ್ರಾಪಂಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ವಿವಿಧ ಯೋಜನೆಗಳ ಮನೆ ನಿರ್ಮಾಣ ಹಾಗೂ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದರು.
500 ಇಂಗು ಗುಂಡಿ ಕಡ್ಡಾಯ: ಬರ ಕಾಣಿಸಿಕೊಂಡಿರುವುದರಿಂದ ಗ್ರಾಮದ ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು, ಈ ಬಾರಿ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ರೈತರ ಜಮೀನುಗಳಲ್ಲಿ ಕನಿಷ್ಠ 500 ಇಂಗು ಗುಂಡಿಗಳನ್ನು ನಿರ್ಮಿಸಬೇಕೆಂದು ಪಿಡಿಒಗಳಿಗೆ ಆದೇಶಿಸಿದರು.
Related Articles
Advertisement
ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಭೇಟಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಂಡಿರುವ ನಾಗಾಪುರ 2,3,4,5 ಮತ್ತು 6ನೇ ಗಿರಿಜನ ಕೇಂದ್ರಗಳಿಗೆ ಭೇಟಿ ನೀಡಿದ ಸಿಇಒ, ಜೇನುಕುರುಬ ಕುಟುಂಬಗಳಿಗೆ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ವೀಕ್ಷಿಸಿ, ಆದಿವಾಸಿಗಳ ಸಂಸ್ಕೃತಿ, ಅವರ ಆಶಯದಂತೆ ಕೇರಳ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ತಾಲೂಕಿನಲ್ಲಿ ನಿರ್ಮಿಸುತ್ತಿರುವ 21 ಅಂಗನವಾಡಿ ಕಟ್ಟಡಗಳು ಶೀಘ್ರ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಸಿಡಿಪಿಒ ನವೀನ್ ಕುಮಾರ್ ಹಾಗೂ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಸೂಚಿಸಿದರು.