Advertisement

ಮಾರ್ಚ್‌ 13ರಿಂದ ಹಣ ವಿತ್‌ಡ್ರಾ ಮಿತಿ ಪೂರ್ಣ ಹಿಂದಕ್ಕೆ

03:45 AM Feb 09, 2017 | Team Udayavani |

ಮುಂಬಯಿ: ನೋಟು ಅಪಮೌಲ್ಯದ ಬಳಿಕ ನಗದು ವಾಪಸ್‌ ಮೇಲೆ ಹಾಕಲಾಗಿದ್ದ ಮಿತಿಯನ್ನು ತೆಗೆದು ಹಾಕಲು ಆರ್‌ಬಿಐ ನಿರ್ಧರಿಸಿದೆ. ಎರಡು ಹಂತಗಳಲ್ಲಿ ಈ ನಿರ್ಧಾರ ಜಾರಿಯಾಗಲಿದ್ದು, ಫೆ. 20 ರಿಂದ ವಾರಕ್ಕೆ 50 ಸಾವಿರ ರೂ. ತೆಗೆಯಲು ಅವಕಾಶ, ಇದಾದ ಅನಂತರ ಮಾ. 13ರಿಂದ ಪೂರ್ಣವಾಗಿ ಮಿತಿ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

Advertisement

ಮುಂಬಯಿಯಲ್ಲಿ ನಡೆದ ಆರ್‌ಬಿಐನ 6ನೇ ದ್ವೆ „ಮಾಸಿಕ ಸಮೀಕ್ಷೆ ಪ್ರಕಟ ಮಾಡಿದ ಅನಂತರ ಮಾತನಾಡಿದ ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಆರ್‌. ಗಾಂಧಿ, ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ಮಿತಿ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸದ್ಯ ಉಳಿತಾಯ ಖಾತೆಯ ಗ್ರಾಹಕರು ವಾರಕ್ಕೆ 24 ಸಾವಿರ ರೂ. ತೆಗೆಯಬಹುದಾಗಿದೆ. ಆದರೆ ಕರೆಂಟ್‌ ಅಕೌಂಟ್‌ನ ಗ್ರಾಹಕರು 1 ಲಕ್ಷ ರೂ. ವರೆಗೆ ವಿತ್‌ಡ್ರಾ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next