Advertisement

ಮಹಾತ್ಮರ ಜಯಂತಿ ಆಚರಣೆ ಜತೆಗೆ ತತ್ವಾದರ್ಶ ಪಾಲಿಸಿ

05:13 AM Feb 02, 2019 | Team Udayavani |

ಹೊನ್ನಾಳಿ: ಮಡಿವಾಳ ಮಾಚಿದೇವ ಬಟ್ಟೆಗಳ ಜತೆಗೆ ಸಮಾಜದ ಕೊಳೆಯನ್ನು ತೊಳೆದ ಮಹಾನ್‌ ದಾರ್ಶನಿಕ ಎಂದು ಜಿ.ಪಂ ಸದಸ್ಯೆ ಉಮಾ ರಮೇಶ್‌ ಹೇಳಿದರು.

Advertisement

ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕನಕ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಶರಣರು ನುಡಿದಂತೆ ನಡೆದು ತೋರಿಸಿದರು. ಮಹಾತ್ಮರ ಜಯಂತಿ ಆಚರಣೆಯೊಂದಿಗೆ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ನುಡಿದರು. ಶಾಸಕ ಎಂ.ಪಿ.ರೇಣುಕಾಚಾರ್ಯ ಸಂದೇಶವನ್ನು ಉಮಾ ರಮೇಶ್‌ ವಾಚಿಸಿದರು.

ಜಿ.ಪಂ ಸದಸ್ಯ ಎಂ.ಆರ್‌. ಮಹೇಶ್‌ ಮಾತನಾಡಿ, ನಮ್ಮ ದೇಶದಲ್ಲಿ ಶರಣರು, ದಾರ್ಶನಿಕರು, ಸಂತರು ಹಾಗೂ ಸ್ವಾಮಿಗಳು ಧರ್ಮದ ದಾರಿಯ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ನಮ್ಮಲ್ಲಿರುವ ಧಾರ್ಮಿಕತೆ, ಸಂಸ್ಕೃತಿ, ಆಚರಣೆಗಳು ವಿಶ್ವದ ಬೇರೆ ಯಾವುದೇ ದೇಶದಲ್ಲಿ ಸಿಗುವುದಿಲ್ಲ ಎಂದು ಹೇಳಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಮಡಿವಾಳ ಮಾಚಿದೇವ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ನಾಗರಾಜಪ್ಪ ಮಾತನಾಡಿ, ಮನುಕುಲದ ಒಳಿತಿಗಾಗಿ ಶರಣರು ತಮ್ಮ ಬದುಕನ್ನೇ ಸವೆಸಿದ್ದಾರೆ. ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅಂತಹ ಮಹಾನ್‌ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಕ್ಕೆ ಬಂದು ಶರಣರಿಗೆ ಗೌರವ ಕೊಡಬೇಕು ಎಂದು ಹೇಳಿದರು.

Advertisement

ಗೊಲ್ಲರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ.ಎಚ್. ಕೋಟೆಪ್ಪ ಮಡಿವಾಳ ಮಾಚಿದೇವ ಕುರಿತು ಮಾತನಾಡಿದರು.

ತಾ.ಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಪ.ಪಂ ಸದಸ್ಯ ಬಾವಿಮನೆ ರಾಜಪ್ಪ, ತಹಶೀಲ್ದಾರ್‌ ತುಷಾರ ಬಿ.ಹೊಸೂರು, ತಾ.ಪಂ ಇಒ ಕೆ.ಸಿ. ಮಲ್ಲಿಕಾರ್ಜುನ, ಬಿಇಒ ಜಿ.ಇ. ರಾಜೀವ್‌, ಪ.ಪಂ ಮುಖ್ಯಾಧಿಕಾರಿ ಎಸ್‌.ಆರ್‌.ವೀರಭದ್ರಯ್ಯ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಜಯರಾಮ್‌ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಷಣ್ಮುಖಪ್ಪ ನೀರೂಪಿಸಿದರು. ಇದಕ್ಕು ಮುನ್ನ ಮಡಿವಾಳ ಮಾಚಿದೇವ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next