ಉಡುಪಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿ ಜತೆಗೆ ರಾಜ್ಯಪಾಲರು ಕೂಡ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ, ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ಅವರು ದೇಶದಲ್ಲಿ ವಿಪಕ್ಷವಿರಬಾರದು ಎಂಬ ರೀತಿಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ತಳೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ಕೋ. ರೂ. ಖರ್ಚು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಇದು ರಾಜ್ಯದ ಜನರಿಗೆ ತಿಳಿಯುತ್ತಿಲ್ಲ ಎಂದು ಅಂದುಕೊಂಡಿದ್ದಾರೆ. ಸ್ಪೀಕರ್‌ಇರುವಾಗ ರಾಜ್ಯಪಾಲರಿಗೆ ರಾಜೀ ನಾಮೆ ನೀಡುವ ಅಗತ್ಯವಿರಲಿಲ್ಲ. ಅತೃಪ್ತ ಶಾಸಕರು ಅವರ ಸಣ್ಣಪುಟ್ಟ ನೋವನ್ನು ಮರೆತು ವಾಪಸಾಗುತ್ತಾರೆ. ಮೈತ್ರಿ ಸರಕಾರಕ್ಕೆ ತೊಂದರೆಯಾಗದು. ಪ್ರಧಾನಿ, ಬಿಜೆಪಿ ರಾಷ್ಟ್ರಾಧ್ಯಕ್ಷರು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೊರಕೆ ಹೇಳಿದರು.
ಮುಂದೆ ಪ.ಬಂಗಾಲ
ನಾಗೇಶ್ ಉದ್ಯಾವರ ಅವರು ಮಾತನಾಡಿ ‘ದೇಶದಲ್ಲಿ ವಿಪಕ್ಷವೇ ಇರಬಾರದು ಎಂಬುದು ಬಿಜೆಪಿಯಹಿಡನ್ ಅಜೆಂಡಾ. ಕರ್ನಾಟಕದಲ್ಲಿ ಇದು ಯಶಸ್ಸಾದರೆ ಮುಂದೆ ಪ. ಬಂಗಾಲ, ಆಂಧ್ರ, ತಮಿಳು ನಾಡಿಗೂ ಇದೇ ಮಾದರಿಯನ್ನು ವಿಸ್ತರಿಸುವ ಉದ್ದೇಶ ಬಿಜೆಪಿಯವರ ದ್ದಾಗಿದೆ’ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ನರಸಿಂಹ ಮೂರ್ತಿ, ಸರಸು ಬಂಗೇರ, ಸರಳಾ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಲೆವೂರು ಹರೀಶ್ ಕಿಣಿ, ರೋಶನಿ ಒಲಿವೆರಾ, ಡಾ| ಸುನಿತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಎಲ್ಲೂರು ಶಶಿಧರ ಶೆಟ್ಟಿ, ಹಬೀಬ್ ಆಲಿ, ಶಬ್ಬೀರ್ ಅಹಮ್ಮದ್, ಜ್ಯೋತಿ ಹೆಬ್ಟಾರ್, ಎಚ್. ನಾರಾಯಣ, ಸುರೇಶ್ ನಾಯ್ಕ, ಹರೀಶ್ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಕಿರಣ್ ಕುಮಾರ್ ಉದ್ಯಾವರ ಪಾಲ್ಗೊಂಡಿದ್ದರು.
ಆಮಿಷಕ್ಕೆ ಬಲಿಯಾಗದಿರಿ
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗೆÛ ಮಾತನಾಡಿ, ‘ಕಾಂಗ್ರೆಸ್‌ನ ಹಿರಿಯ ಶಾಸಕರು ಕೂಡ ಬಿಜೆಪಿಯತ್ತ ಮುಖ ಮಾಡಿರುವುದು ದುರದೃಷ್ಟಕರ. ಇದರಿಂದಾಗಿ ಅವರ ಹಿಂದೆ ಕೆಲಸ ಮಾಡಿದ್ದ ಕಾರ್ಯಕರ್ತರಿಗೆ ಅಪಾರ ನೋವಾಗಿದೆ ಎಂದು ಹೇಳಿದರು.